ಕೊಡ್ಲಾಡಿ ದೈವಸ್ಥಾನ ಪ್ರತಿಷ್ಠಾಪನಾ ವರ್ಧಂತ್ಯುತ್ಸವ

gan-6
Published on

ಗಂಗೊಳ್ಳಿ: ಕೊಡ್ಲಾಡಿ ಗ್ರಾಮದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ 27ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ನಡೆಯಿತು.

ನವಕುಂಭಸ್ಥಾಪನಾದಿ ಹೋಮ, ಹಾಗುಳಿ ಮತ್ತು ನಾಗ ದೇವರಿಗೆ ಕುಂಭಾಭಿಷೇಕ, ಮಹಾಪೂಜೆ, ನಾಗ ದೇವರ ಹಾಗೂ ಹಾಗುಳಿ ದೈವದ ಸಂದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಢಕ್ಕೆ ಬಲಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಪುರೋಹಿತರು, ದೈವಸ್ಥಾನ ಆಡಳಿತ ಮೊಕ್ತೇಸರ ಭಾಂಡ್ಯ ಸುಬ್ಬಣ್ಣ ಶೆಟ್ಟಿ, ಭಾಂಡ್ಯ ಸುಭಾಶ್ ಶೆಟ್ಟಿ, ಭಾಂಡ್ಯ ಸುಧಾಕರ ಶೆಟ್ಟಿ, ಭಾಂಡ್ಯ ಗೋವಿಂದ್ರಾಯ ಪೈ, ಆಡಳಿತ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net