ಹೆಬ್ರಿ: ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರದಲ್ಲಿ ಶನಿವಾರ ಸಾಮೂಹಿಕ ಹುಟ್ಟುಹಬ್ಬ, ಪ್ರತಿಭಾ ಪುರಸ್ಕಾರ ಮತ್ತು ಪಾಲಕರ ಕಲಾಕಲರವ ಜರುಗಿತು.
ಸೇವಾಸಂಗಮ ಅಮೃತ ಭಾರತಿ ಶಿಶುಮಂದಿರ ಅಧ್ಯಕ್ಷ ಸುಧೀರ್ ನಾಯಕ್ ಮಾತನಾಡಿ, ಶಿಶುಮಂದಿರದಲ್ಲಿ ಪುಟಾಣಿಗಳಿಗೆ ಶಿಕ್ಷಣವನ್ನು ಚಟುವಟಿಕೆ ಆಧರಿತ, ಅನುಭವ ಆಧರಿತವಾಗಿ ನೀಡುವುದರ ಜತೆಗೆ ಸಂಸ್ಕಾರ, ಜೀವನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಟಾಣಿಗಳ ವಿವಿಧ ಪ್ರತಿಭೆ ಗುರುತಿಸಿ ಬಹುಮಾನ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪಾಲಕರನ್ನು ಗೌರವಿಸಲಾಯಿತು. ಅಮೃತ ಭಾರತಿ ಟ್ರಸ್ಟ್ ಸದಸ್ಯ ಬಾಲಕೃಷ್ಣ ಮಲ್ಯ, ಶೈಲೇಶ್ ಕಿಣಿ, ಟ್ರಸ್ಟಿಗಳಾದ ಲಕ್ಷ್ಮಣ ಭಟ್, ರಾಮಕೃಷ್ಣ ಆಚಾರ್, ರಾಜೇಶ್ ನಾಯಕ್, ರವಿ ರಾವ್, ವಿಷ್ಣುಮೂರ್ತಿ ನಾಯಕ್, ಪ್ರಮುಖರಾದ ಪದ್ಮಾ ನಾಯಕ್, ನಂದಿನಿ ಡಾಂಗೆ, ಲಕ್ಷ್ಮೀ ನಾಯಕ್, ಆಶಾ ನಾಯಕ್, ವಿಜಯಕುಮಾರ್ ಶೆಟ್ಟಿ, ಶಿಶುಮಂದಿರದ ಮಾತಾಜಿಯವರು, ಪಾಲಕರು, ಸಹಾಯಕ ವರ್ಗದವರು ಉಪಸ್ಥಿತರಿದ್ದರು.