ಕೊಡಮಣಿತ್ತಾಯ ದೈವಸ್ಥಾನ ಚಪ್ಪರ ಮೂಹೂರ್ತ

Bel_Chappara
Published on

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪುನಃ ಪ್ರತಿಷ್ಠಾಪನಾ ಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವ ಫೆ.9ರಿಂದ 13ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ ದೈವಸ್ಥಾನದ ಆನುವಶಿಂಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು ನೇತೃತ್ವದಲ್ಲಿ ಗುರುವಾರ ನಡೆಯಿತು.

ದೈವಸ್ಥಾನದ ಪ್ರಧಾನ ಅರ್ಚಕ ರತ್ನಾಕರ ನೂರಿತ್ತಾಯ ಚಪ್ಪರ ಮೂಹೂರ್ತದ ಪೂಜಾ ವಿಧಿ ನೆರವೇರಿಸಿದರು. ಹಿರಿಯರಾದ ಕಾಂತಪ್ಪ ನಾಯ್ಕ ಮತ್ತು ಅವರ ಸಹೋದರ ನಾರಾಯಣ ನಾಯ್ಕ ದೈವಸ್ಥಾನದ ಕುಂಭಾಭಿಷೇಕದ ವಿಶೇಷ ಚಪ್ಪರ ಮೂಹೂರ್ತ ನೆರವೇರಿಸಿದರು.

ಸುನೀಶ್ ಕುಮಾರ್ ಕಡಂಬು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ವಾತ್ಸಲ್ಯ, ಆನಂದ ಶೆಟ್ಟಿ ವಾತ್ಸಲ್ಯ, ಸನ್ಮಾತಿ ಜೈನ್, ವಿಠಲ ಆಚಾರ್ಯ, ಪ್ರಶಾಂತ ಸಾಲ್ಯಾನ್, ಚಂದ್ರಹಾಸ ದಾಸ್, ಚಪ್ಪರ ಸಮಿತಿ ಸಂಚಾಲಕ ಕೃಷ್ಣಯ್ಯ ಆಚಾರ್ಯ ಗದ್ದೆಮನೆ, ಸಹ ಸಂಚಾಲಕ ಕೇಶವ ಆಚಾರ್ಯ, ಐತಪ್ಪ ಮಡಿವಾಳ, ರವಿ ಸಫಲ್ಯ ಕೋಡಿ, ಸದಾಶಿವ ಶೆಟ್ಟಿ ಅಮರ್‌ಜಾಲ್, ಮಂಜುನಾಥ ಆಚಾರ್ಯ ಕನ್ನಡಿಕಟ್ಟೆ, ಲಕ್ಷ್ಮಣ ಆಚಾರ್ಯ ಮಾಯಿಂದೊಟ್ಟು, ಸದಾಶಿವ ಆಚಾರ್ಯ ಮುಂಡೂರು, ಚಂದ್ರಯ ಆಚಾರ್ಯ ಮುಂಡೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net