

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಫೆ.2ರಂದು ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಬೆಳಗ್ಗೆ 108 ಕಾಯಿ ಗಣಪತಿ ಹೋಮ, ಮೂಡಪ್ಪ ಸೇವೆ ನಡೆಯಲಿದೆ. ಬೆಳಗ್ಗೆ 8ಕ್ಕೆ 108 ಕಾಯಿ ಗಣಪತಿ ಹೋಮ ಮತ್ತು ಅಥರ್ವ ಶೀರ್ಷಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಮೂಡಪ್ಪ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ.
ಬೆಳಗ್ಗಿನಿಂದ ಸಂಜೆಯವರೆಗೆ ವಾಮನ್ ನಾಯಕ್ ಉಪ್ಪಿನಂಗಡಿ ನೇತೃತ್ವದಲ್ಲಿ ಭಜನಾ ಸೇವೆ, ಸಂಜೆ 5ಕ್ಕೆ ಮಂಗಳೂರು ಸುವರ್ಣ ನೃತ್ಯ ತಂಡದವರಿಂದ ಸೇವಾರ್ಥ ಭರತನಾಟ್ಯ, ಸೌತಡ್ಕ ಶಿಶು ಮಂದಿರ ಪುಟಾಣಿಗಳಿಂದ ಚಿನ್ನರ ಚಿಲಿಪಿಲಿ, ತುಳುನಾಡ ಗಾನ ಗಂಧರ್ವ ಜಗದೀಶ್ ಅಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ, ರಾತ್ರಿ 9.3ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ ತುಳು ನಾಟಕ ಕಲ್ಜಿಗದ ಮಾಯ್ಕರೆ ಪಂಜುರ್ಲಿ ಪ್ರದರ್ಶನ ನಡೆಯಲಿದೆ.