ಕುಮಾರಸ್ವಾಮಿ ಪೆನ್​ಡ್ರೈವ್​ ಹೆಸರಿನಲ್ಲಿ ದಂಧೆ ಮಾಡುತ್ತಿದ್ದಾರೆ: ಕೆ.ಎನ್. ರಾಜಣ್ಣ

KN Rajanna
Published on

ಮೈಸೂರು: ಪೆನ್​ಡ್ರೈವ್​ ಹೆಸರಿನಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ದಂಧೆ ನಡೆಸುತ್ತಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್​. ರಾಜಣ್ಣ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ ಕುಮಾರಸ್ವಾಮಿಯವರಿಗೆ ತಾಕತ್​ ಇದ್ರೆ ಪೆನ್​ಡ್ರೈವ್ನಲ್ಲಿ ಏನಿದೆ ಎಂಬುದನ್ನು ತೋರಿಸಲಿ ಎಂದು ಸವಾಲೆಸೆದಿದ್ದಾರೆ.

ಪರಿಸ್ಥಿತಿ ಹೇಗಾಗಿದೆ ಎಂದರೆ

ಕುಮಾರಸ್ವಾಮಿ ಅವರು ಪೆನ್​ಡ್ರೈವ್​ ಇಟ್ಟುಕೊಂಡು ದಂಧೆ ಮಾಡುತ್ತಿದ್ದಾರೆ. ಸುಮ್ಮನೆ ಈ ರೀತಿ ಹೇಳುವ ಬದಲು ಅದರಲ್ಲಿ ಏನಿದೆ ಎಂಬುದನ್ನು ಜನತೆಗೆ ತೋರಿಸಲಿ. ಅವರ ಪರಿಸ್ಥಿತಿ ಹೇಗಾಗಿದೆ ಎಂದರೆ ಜಾತ್ರೆಗಳಲ್ಲಿ ಬುಟ್ಟಿ ಹಿಡಿದುಕೊಂದು ಹಾವಿದೆ ಹಾವಿದೆ ಎಂದು ಹೇಳುತ್ತಾರಲ್ಲ ಹಾಗಾಗಿದೆ ಎಂದು ಟೀಕಿಸಿದ್ದಾರೆ.

KN Rajanna

ಅವರ ಬಳಿ ಇರುವ ಬುಟ್ಟಿಯಲ್ಲಿ ಯಾವ ಹಾವು ಇಲ್ಲ ಸುಮನ್ನೆ ಪೆನ್​ಡ್ರೈವ್​ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಒಂದು ವೇಳೆ ಅಂತಹ ಮಹತ್ವದ ವಿಚಾರ ಇದ್ದರೂ ಸಹ ಬಿಡುಗಡೆ ಮಾಡುವ ವಿಚಾರದಲ್ಲಿ ತಡ ಯಾಕೆ ಮಾಡುತ್ತಿದ್ದೀರಾ. ಈ ವಿವಾರದಲ್ಲಿ ನನಗೆ ಯಾವುದೇ ಕುತೂಹಲ ಇಲ್ಲ ಮುಂದೆ ಈ ಬಗ್ಗೆ ಗುತ್ತಾಗುತ್ತದೆ ಎಂದು ಹೇಳಿದ್ದಾರೆ.

ದರ ಹೆಚ್ಚಳ

ಇನ್ನು ಹಾಲಿನ ಪ್ರೋತ್ಸಾಹ ಧನ ಏರಿಕೆ ಕುರಿತು ಸರ್ಕಾರದ ಮುಂದೆ ಪ್ರಸ್ತಾಪ ಸಲ್ಲಿಕೆಯಾಗಿದ್ದು, ಈ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಹಾಲಿನ ದರ ಏರಿಕೆ ಎಂದ ಕೂಡಲ್ಲೇ ಜನ ಗಾಬರಿಯಾಗುತ್ತಾರೆ. ಇದರಲ್ಲಿ ಎರಡು ವಿಧಗಳಿದ್ದು, ಒಂದು ಹಾಲು ಉತ್ಪಾದಕರಿಗೆ ಕೊಡುವುದು ಮತ್ತೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಈ ಎರಡರ ದರವು ಕಡಿಮೆ ಇದೆ. ಹಾಲಿನ ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾರಿಗೂ ಹೊರಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಕೆ.ಎನ್​. ರಾಜಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net