More

    ಪಂಚಾಯತ್​ ಚುನಾವಣೆ; ಪಕ್ಷೇತರ ಅಭ್ಯರ್ಥಿಯ ಪುತ್ರಿ ಹಣೆಗೆ ಗುಂಡು

    ಕೊಲ್ಕತ್ತ: ಮತದಾನ ಪೂರ್ವ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳ ಪಂಚಾಯತ್​ ಚುನಾವಣೆ ಇದೀಗ ತೀವ್ರ ರೂಪ ಪಡೆದಿದ್ದು, ಟಿಎಂಸಿಯ ಮುಖಂಡನೋರ್ವ ಪಕ್ಷೇತರ ಅಭ್ಯರ್ಥಿಯ ಪುತ್ರಿಯ ಹಣೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಚಂದನಾ ಸಿಂಗ್​(20) ಎಂದು ಗುರುತಿಸಲಾಗಿದ್ದು, ಈಕೆಯ ತಂದೆ ಪಿಂಟು ಸಿಂಗ್ ಟಿಎಂಸಿ ಪಕ್ಷದಿಂದ ಟಿಕೆಟ್​ ನಿರಾಕರಿಸಿ ಕಾರಣ​ ಪಕ್ಷೇತರ ಅಭ್ಯರ್ಥಿಯಾಗಿ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

    ಹಣೆಗೆ ಗುಂಡಿಕ್ಕಿ ಹತ್ಯೆ

    ತಮ್ಮ ಮಗಳನ್ನು ಹತ್ಯೆ ಮಾಡಿರುವ ಕುರಿತು ಮಾತನಾಡಿರುವ ಪಿಂಟು ಸಿಂಗ್​ ಗುಂಪೊಂದು ಏಕಾಏಕಿ ನಮ್ಮ ಮನೆಗೆ ನುಗ್ಗಿ ನನ್ನ ಮಗಳ ಹಣೆಗೆ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಯಾರು ಯಾರು ಸಹ ಪ್ರಕರಣ ದಾಖಲಿಸಿಕೊಳ್ಳಲು ಮುಂದೆ ಬರುತ್ತಿಲ್ಲ.

    WB Violence

    ಇದನ್ನೂ ಓದಿ: VIDEO| ಮಗನ ಮೃತದೇಹ ಹಸ್ತಾಂತರಿಸಲು ನಿರಾಕರಿಸಿದ ತಾಯಿಯ ಕಪಾಳಕ್ಕೆ ಹೊಡೆದ ಪೊಲೀಸ್​

    ಈ ಹಿಂದೆ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಎಂದಿ ಪಕ್ಷದಿಂದ ಟಕೆಟ್​ ಬಯಸಿದ್ದೆ. ಆದರೆ, ಟಿಕೆಟ್​ ನೀಡದ ಕಾರಣ ನಾನು ಪಕ್ಷೇತರನಾಗಿ ಕಣಕ್ಕಿಳಿದ ಕಾರಣ ಈ ರೀತಿ ಮಾಡಲಾಗಿದೆ. ಮಗಳ ಸಾವಿಗೆ ನ್ಯಾಯ ದೊರೆಕುವವರೆಗೂ ನಮ್ಮ ಹಜೋರಾಟ ನಿಲ್ಲುವುದಿಲ್ಲ ಎಂದು ಮೃತ ಯುವತಿಯ ತಂದೆ ಪಿಂಟು ಸಿಂಗ್​ ಹೇಳಿದ್ದಾರೆ.

    ಘಟನೆ ನಡೆದ ಸ್ಥಳದಲ್ಲಿ ಬುಲೆಟ್​ ಹಾಗೂ ಬಾಂಬ್​ ಶೆಲ್​ಗಳು ಪತ್ತೆಯಾಗಿದ್ದು, ಈ ಕುರಿತು ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ವಶಪಡಿಸಿಕೊಳ್ಳುವಂತೆ ಹೇಳಿದರು ಸಹ ಯಾವುದೇ ತ್ವರಿತ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts