ಕಡಿಮೆ ತೂಕದ ಶಿಶುವಿಗೆ ಶಸ್ತ್ರಚಿಕಿತ್ಸೆಯಲ್ಲದ PDA ಸಾಧನ ಮುಚ್ಚುವಿಕೆಯಲ್ಲಿ ಕೆಎಂಸಿ ಆಸ್ಪತ್ರೆ ಯಶಸ್ಸು | KMC Hospital

KMC Hospital
Published on

KMC Hospital : ವೈದ್ಯಕೀಯ ಜಗತ್ತಿನಲ್ಲೇ ಮಹತ್ವದ ದಿನ ಇಂದು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ.ಆಸ್ಪತ್ರೆಯು ಕೇವಲ ನಾಲ್ಕು ಕೆಜಿ ತೂಕದ ನಾಲ್ಕು ತಿಂಗಳ ಹಸುಗೂಸಿಗೆ ಶಸ್ತ್ರಚಿಕಿತ್ಸೆಯಲ್ಲದ PDA ಸಾಧನ ಮುಚ್ಚುವಿಕೆ ಮಾಡಿ, ಯಶಸ್ಸನ್ನು ಕಂಡಿದೆ. ಇದನ್ನು ವೈದ್ಯ ಲೋಕದ ಅಚ್ಚರಿಯಂದೇ ಹೇಳಬಹುದು.

ತನ್ನ ಕಡಿಮೆ ತೂಕದಿಂದಾಗಿ ಈ ಶಿಶುವು ಬೇರೆ ಆಸ್ಪತ್ರೆಯಿಂದ ಕೆ.ಎಂ.ಸಿ ಆಸ್ಪತ್ರೆಗೆ ತುರ್ತಾಗಿ ರವಾನೆಯಾಗಿತ್ತು. ಶಿಶು ಅನುಭವಿಸುತ್ತಿದ್ದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಹಾಗೂ ಅನಸ್ತೇಶಿಯಾ ನೀಡುವುದು ಸವಾಲಿನದ್ದಾಗಿತ್ತು. ತಜ್ಞ ವೈದ್ಯರನ್ನೇ ಹೊಂದಿರುವ ಆಸ್ಪತ್ರೆಯಲ್ಲಿ ಪ್ರಮುಖ ಆರೈಕೆ ಒದಗಿಸುವುದು ಅತ್ಯಂತ ದುರ್ಬಲ ರೋಗಿಗೆ ಸವಾಲಾಗಿತ್ತು.

ಉಸಿರಾಟದ ಸೋಂಕಿನ ಕಾಯಿಲೆಯಿಂದ ಬಳಲುತ್ತಿರುವ ಶಿಶುವಿಗೆ ಶಸ್ತ್ರಚಿಕಿತ್ಸೆಯಲ್ಲದ PDA ಮಾತ್ರ ಏಕೈಕ ಪರಿಹಾರವಾಗಿತ್ತು. ಈ ಚಿಕಿತ್ಸೆಗೆ ಪ್ರಸಿದ್ದ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಿಗೆ ಅರಿವಳಿಕೆ ತಜ್ಞ ಹಾಗೂ ಖ್ಯಾತ ಲ್ಯಾಬ್ ತಜ್ಞರು ಸಾಥ್ ನೀಡಿದರು. ಅತಿಯಾದ ಕಡಿಮೆ ತೂಕದಿಂದ ಬಳಲುತ್ತಿದ್ದ ಶಿಶುವಿಗೆ ತಜ್ಞರ ತಂಡವು ಭಾರೀ ಜಾಗರೂಕತೆ ಮೂಲಕ ಚಿಕಿತ್ಸೆ ನೀಡುವಲ್ಲಿ ಯಶಸ್ಸು ಕಂಡಿದೆ.

ಚಿಕಿತ್ಸಾ ತಂಡದ ನೇತೃತ್ವ ವಹಿಸಿದ್ದ ಕೆ.ಎಂ.ಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಮಾತನಾಡಿ, ಕಡಿಮೆ ತೂಕದ ಶಿಶುವಿನ ಇಂಥಾ ಪ್ರಕರಣ ಭಾರೀ ಅಪರೂಪ. ಶಸ್ತ್ರಚಿಕಿತ್ಸೆಯನ್ನು ಕಾರ್ಯರೂಪಕ್ಕೆ ತರಲು ಅನುಭವಬೇಕು. ವಿಶೇಷ ಅನುಭವವಿರುವ ತಂಡದ ಬೆಂಬಲ ಬೇಕು. ಈ ಶಿಶುವಿಗೆ ಮರು ಜೀವನ ನೀಡುವಲ್ಲಿ ಯಶಸ್ಸು ಕಂಡಿದ್ದು, ಸಂತಸ ನೀಡಿದೆ. ಶಸ್ತ್ರಚಿಕಿತ್ಸೆಯಲ್ಲದ PDA ಯಶ ಕಂಡಿದೆ. ಸುರಕ್ಷಿತ ಹಾಗೂ ಕಡಿಮೆ ನೋವಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಹೇಳಬಯಸುತ್ತೇನೆ ಎಂದರು.

ಭಾರೀ ಕ್ಲಿಷ್ಟ ಪ್ರಕರಣವಾದ ಸಣ್ಣ ಶಿಶುವಿಗೆ ಶಸ್ತ್ರಚಿಕಿತ್ಸೆ ನೀಡುವಲ್ಲಿ ಯಶ ಕಂಡಿದ್ದು, ಹೆಮ್ಮೆ ನೀಡಿದೆ. ಇದರಿಂದಾಗಿ, ನಮ್ಮ ಆಸ್ಪತ್ರೆಯ ಘನತೆ ಹೆಚ್ಚಿದೆ. ಇದು ಆಸ್ಪತ್ರೆಯ ಬದ್ಧತೆಗೆ ಸಾಕ್ಷಿ ಎಂದು ಕೆ.ಎಂ.ಸಿ. ಆಸ್ಪತ್ರೆಯ ಪ್ರಾದೇಶಿಕ ಸಿಒಒ ಸಾಘರ್ ಸಿದ್ದಕಿ ಅವರು ಹೇಳಿದರು. ನಮ್ಮ ಆಸ್ಪತ್ರೆಯ ವೈದ್ಯರ ತಂಡದ ಸವಾಲುಗಳನ್ನು ಎದುರಿಸುವ ಖ್ಯಾತಿಯಿಂದ ಇಂಥಾ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಧುನಿಕ ವೈದ್ಯಕೀಯ ಹಾಗೂ ಕ್ಲಿಷ್ಟ ಚಿಕಿತ್ಸೆ, ಈ ಮೂಲಕ ಜೀವ ಉಳಿಯುವ ಭರವಸೆ ಈಡೇರಿಸುವಲ್ಲಿ ಕೆ.ಎಂ.ಸಿ ಆಸ್ಪತ್ರೆಯು ಒಂದು ಹೆಜ್ಜೆ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net