

ಕೊಕ್ಕರ್ಣೆ: ಮಂದಾರ್ತಿ ಕೆ.ಎಂ.ಉಡುಪ ಪ್ರತಿಷ್ಠಾನ ವತಿಯಿಂದ ದಿ.ಶಾಂತಾ ಎಂ.ಉಡುಪ ಮತ್ತು ದಿ.ಕೆ.ಎಂ.ಉಡುಪ ಅವರ ಸ್ಮರಣಾರ್ಥ 20 ಲಕ್ಷ ರೂ. ಸಹಾಯಧನ, ದೇಣಿಗೆ ವಿತರಣೆ ಕಾರ್ಯಕ್ರಮ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂದಿರದಲ್ಲಿ ನೆರವೇರಿತು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿ, ಸಮಾಜಕ್ಕೆ ಕೆ.ಎಂ.ಉಡುಪ ಅವರ ಕೊಡುಗೆ ಹಾಗೂ ಅದೇ ಹಾದಿಯಲ್ಲಿ ಸಾಗುತ್ತಿರುವ ಪುತ್ರ ಕೆ.ಮಹೇಶ್ ಉಡುಪ ಅವರ ಕಾರ್ಯ ಶ್ಲಾಘನೀಯ ಎಂದರು.
ಶಾಸಕ ಕಿರಣ್ ಕುವಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. 125 ಮಂದಿಗೆ ಸಹಾಯಧನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಗೆ, ಯಕ್ಷ ಕಲಾರಂಗಕ್ಕೆ, ಬ್ರಹ್ಮಾವರ ರೋಟರಿಗೆ ದೇಣಿಗೆ ಹಸ್ತಾಂತರಿಸಲಾಯಿತು. ವೈದ್ಯಾಧಿಕಾರಿ ಡಾ.ಅನಿಲ್ ಕುವಾರ್ ಅವರನ್ನು ಸನ್ಮಾನಿಸಲಾಯಿತು.
ಆನುವಂಶಿಕ ಮೊಕ್ತೇಸರ ಎಚ್.ಧನಂಜಯ್ ಶೆಟ್ಟಿ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರಗತಿಪರ ಕೃಷಿಕ ಎಚ್.ವಿಠಲ ಶೆಟ್ಟಿ, ಶ್ರೀಪತಿ ಅಡಿಗ, ಕೆ.ಮೋಹನ ಉಡುಪ, ವಾಧವ ಉಡುಪ, ಸಂಜಯ ಉಡುಪ ಉಪಸ್ಥಿತರಿದ್ದರು.
ಮಹೇಶ್ ಉಡುಪ ಸ್ವಾಗತಿಸಿದರು. ಸಖಾರಾಮ ಸೋಮಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು.