ಕಿರಿಮಂಜೇಶ್ವರ ಮನ್ಮಹಾರಥೋತ್ಸವ ಸಂಪನ್ನ

ratha
ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಳದ ವಾರ್ಷಿಕ ಮನ್ಮಹಾರಥೋತ್ಸವ ಗುರುವಾರ ಜರುಗಿತು
Published on

ಬೈಂದೂರು: ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಳ ವಾರ್ಷಿಕ ಮನ್ಮಹಾರಥೋತ್ಸವ ಗುರುವಾರ ಜರುಗಿತು. ರಾಜ್ಯದಲ್ಲಿಯೇ ಕೋಟೇಶ್ವರ ದೇವಳ ಮನ್ಮಾಹಾರಥೋತ್ಸವ(ಕೊಡಿಹಬ್ಬ) ಪ್ರಥಮವಾಗಿದ್ದರೆ, ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಳದ ಮನ್ಮಾಹರಥೋತ್ಸವ ಕೊನೆಯ ರಥೋತ್ಸವ ಎಂಬ ಪ್ರತೀತಿಯಿದೆ.

ಬೆಳಗ್ಗೆ ಪ್ರಧಾನ ತಂತ್ರಿ ಕೃಷ್ಣ ಸೋಮಯಾಜಿ ಕೋಟ, ಪ್ರಧಾನ ಅರ್ಚಕ ರಾಮಚಂದ್ರ ಕಾರಂತ್ ನೇತೃತ್ವದಲ್ಲಿ ನಿತ್ಯಬಲಿ, ಅಧಿವಾಸ ಹೋಮ, ರಥಶುದ್ಧಿ, ರಥಬಲಿ ನಾನಾ ಧಾರ್ಮಿಕ ವಿಧಿವಿಧಾನ ನೆರವೇರಿತು. ನಂತರ ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಸಂಜೆ ವಿಶೇಷ ದೀಪಾಲಂಕಾರ, ಚೆಂಡೆವಾದನ, ಕೀಲು ಕುದುರೆ, ವಾದ್ಯಘೋಷ, ವಿವಿಧ ಭಜನಾ ತಂಡಗಳಿಂದ ದಾಸ ಸಂಕೀರ್ತನೆ ಸಹಿತ ಕುಣಿತ ಭಜನೆ, ಛತ್ರ ಚಾಮರ, ಧ್ವಜ ಇನ್ನಿತರ ಸಕಲ ಷೋಢಶೋಪಚಾರದೊಂದಿಗೆ ಸಾವಿರಾರು ಭಕ್ತರು ಪುಷ್ಪಾಲಂಕಾರ ಸಹಿತವಾದ ಮನ್ಮಹಾರಥ ಎಳೆದು ಸಂಭ್ರಮಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ವಿ.ಪ್ರಕಾಶ್ ಐತಾಳ್, ಸಮಿತಿ ಸದಸ್ಯರಾದ ರಾಮಕೃಷ್ಣ ಭಟ್, ಗೋಪಾಲ ಶೆಟ್ಟಿ ಹಳಗೇರಿ, ವಿಜಯ ಪೂಜಾರಿ ಕೊಡೇರಿ, ಲಕ್ಷ್ಮೀ ಮೊಗವೀರ ಹೊಸಹಿತತ್ಲು, ಸರಸ್ವತಿ ನಾಯರಿ ಕಿರಿಮಂಜೇಶ್ವರ, ಕೆ.ಮಂಜುನಾಥ ಅರೆಹೊಳೆ, ಲಕ್ಷ್ಮಣ ದೇವಾಡಿಗ ಆಕಳಬೈಲು, ಮಂಜುನಾಥ ಪಿ.ಗಂಗೆಬೈಲು, ತಂತ್ರಿಗಳು, ಅರ್ಚಕವೃಂದ, ಉಪಾದಿವಂತರು, ಸಿಬ್ಬಂದಿ ವರ್ಗ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net