ಕೆಯ್ಯೂರು ದೇವಸ್ಥಾನ ಚಪ್ಪರ ಮುಹೂರ್ತ

17
Published on

ಪುತ್ತೂರು ಗ್ರಾಮಾಂತರ: ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ-ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ.21ರಿಂದ 28ರವರೆಗೆ ನಡೆಯುವ ಜಾತ್ರೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮ ಮಂಗಳವಾರ ನಡೆಯಿತು.

ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಶಶಿಧರ ರಾವ್ ಬೊಳಿಕಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಗ್ರಾಮಸ್ಥರ ಉಪಸ್ಥಿತಿಯಲ್ಲಿ ಅರ್ಚಕ ಶ್ರೀನಿವಾಸ ರಾವ್ ಪೂಜೆ ಸಲ್ಲಿಸಿ, ಪ್ರಾರ್ಥನೆ ನೆರವೇರಿಸಿದರು. ಬಳಿಕ ಚಪ್ಪರ ಮಹೂರ್ತಕ್ಕೆ ಚಾಲನೆ ನೀಡಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾಕಾಂತ್ ಬೈಲಾಡಿ, ಕೆ.ಎಸ್.ಚಂದ್ರಶೇಖರ ಪೂಜಾರಿ ಕಣಿಯಾರು, ಅಶೋಕ ರೈ ದೇರ್ಲ, ಹರಿನಾಥ ಇ, ಕೆಯ್ಯೂರು ಶ್ರೀದುರ್ಗಾ ಭಜನಾ ಮಂಡಳಿ ಅಧ್ಯಕ್ಷ ದೇವಣ್ಣ ನಾಯ್ಕ, ಚಪ್ಪರ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಪಿ.ಎಸ್.ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ಬಾಬು ಪಾಟಾಳಿ ದೇರ್ಲ, ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಚಂದ್ರಶೇಖರ ರೈ ಇಳಂತಾಜೆ, ಗಣೇಶ್ ಭಟ್ ಕೈತ್ತಡ್ಕ, ಶಿವಶ್ರೀ ರಂಜನ್ ರೈ ದೇರ್ಲ, ಶಶಿ ಪಾಟಾಳಿ ಮೇರ್ಲ, ಉದಯ ಕೆಂಗುಡೇಲು, ವಿನಯ ಕೋಡ್ಲೆ, ಪ್ರಜ್ವಲ್ ಕೋಡ್ಲೆ, ರಘುನಾಥ ಗೌಡ ಕೆಯ್ಯೂರು, ಕೃಷ್ಣಸಾಮಾನಿ ಕೆಯ್ಯೂರು, ಕೊರಗಪ್ಪ ರೈ ಸಣಂಗಳ, ಸತೀಶ್ ರೈ ದೇರ್ಲ, ಯಶೋದಾ ರೈ ನೆಟ್ಟಾಳ, ದಿವಾಕರ್ ರೈ ನೆಟ್ಟಾಳ, ಗಣೇಶ್ ಕೆಯ್ಯೂರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net