ಹೆದ್ದಾರಿ ಸಮಸ್ಯೆ ನಿವಾರಣೆಗೆ ಮನವಿ

6
Published on

ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ, ಕೇಂದ್ರ ಭೂ ಸಾರಿಗೆ-ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆ ಮತ್ತು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಚಟ್ಟಂಚಾಲ್ ಸನಿಹದ ಕುಣಿಯದಲ್ಲಿ ಪ್ರತ್ಯೇಕ ಪಾದಚಾರಿ ಸೇತುವೆ, ಉಪ್ಪಳ ಮೇಲ್ಸೇತುವೆಯ ಉದ್ದ ವಿಸ್ತರಣೆ, ಚೆರುಂಬ ಹಾಗೂ ನುಳ್ಳಿಪಾಡಿಯಲ್ಲಿ ಕೆಳಸೇತುವೆ, ಶಿರಿಯಾದಲ್ಲಿ ಮೇಲ್ಸೇತುವೆ ಹಾಗೂ ಮುಳಕಲ್ಲಿನಲ್ಲಿ ಪಾದಚಾರಿ ಸೇತುವೆ ನಿರ್ಮಾಣದ ಕುರಿತು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net