

ಬೆಂಗಳೂರು:ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮವನ್ನು ಉತ್ತೇಜಿಸಲು, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ (ಕಿಯೋನಿಕ್ಸ್) ನೂತನ ಇ-ಕಾರ್ಮಸ್ ಪೋರ್ಟಲ್ ಸೋಮವಾರ ಲೋಕಾರ್ಪಣೆಗೊಂಡಿದೆ. ಈ ಮೂಲಕ 2 ವರ್ಷಗಳಿಂದ ಎದುರಿಸುತ್ತಿದ್ದ ಹಲವು ಸಮಸ್ಯೆಗಳಿಗೆ ಕಿಯೋನಿಕ್ಸ್ ಪರಿಹಾರ ಒದಗಿಸಿದೆ.
ಸರ್ಕಾರದ ವಿವಿಧ ಇಲಾಖೆಗಳು ತಮಗೆ ಅವಶ್ಯವಾದ ಸಾಮಗ್ರಿಗಳನ್ನು ಜಾಗತಿಕ ಸ್ಪರ್ಧಾತ್ಮಕ ದರ ಹೊಂದಲು ಅನುಕೂಲವಾಗುವಂತೆ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಕಂಪ್ಯೂಟರ್, ಹಾರ್ಡ್ವೇರ್, ಸಾಫ್ಟ್ವೇರ್, ವಿದ್ಯುನ್ಮಾನ ಮತ್ತು ಸೋಲಾರ್ ಉಪಕರಣಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಸ್ಥೆ ಸರಬರಾಜು ಮಾಡುತ್ತಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಮಾಹಿತಿ ತಂತ್ರಾಜ್ಷಾನ ಕ್ಷೇತ್ರದಲ್ಲಿ ಆಳವಾದ ಅನುಭವ ಹೊಂದಿರುವ ಕಿಯೋನಿಕ್ಸ್, ಹೊಸ ಇ-ಕಾಮರ್ಸ್ ಪೋರ್ಟಲ್ ಮೂಲಕ ರಾಜ್ಯ ಮತ್ತು ದೇಶಕ್ಕೆ ಹೊಸ ಮುನ್ನುಡಿ ಬರೆಯಲಿದೆ. ತಂತ್ರಾನದಿಂದಲೇ ಅಭಿವೃದ್ಧಿ, ಸಂಪತ್ತು ಮತ್ತು ಶಿಕ್ಷಣ ಎನ್ನುವಂತಾಗಿದೆ. ಪ್ರತಿಯೊಂದು ಏಳಿಗೆಯೂ ತಂತ್ರಾನದ ಮೂಲಕ ನೋಡುವಂತಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಹೊಸ ತಂತ್ರಾನದ ಶಿಕ್ಷಣ ನೀಡಿರುವ ಕಿಯೋನಿಕ್ಸ್ ಉದ್ಯೋಗ ಸೃಷ್ಟಿ ಮಾಡಿದೆ. ನೂತನ ತಂತ್ರಾನದ ವಿಚಾರದಲ್ಲಿ ಈ ಸಂಸ್ಥೆ ದೇಶಕ್ಕೆ ಮಾದರಿಯಾಗಿದೆ ಎಂದರು.
ಅನೇಕ ರಾಜ್ಯಗಳಿಗೆ ತನ್ನ ಸೇವೆಯನ್ನು ನೀಡುತ್ತಿದ್ದ ಈ ಸಂಸ್ಥೆ ಒಂದಷ್ಟು ವರ್ಷಗಳಿಂದ ಮಂಕಾಗಿತ್ತು. ಇದಕ್ಕೆ ಪರಿಹಾರ ನೀಡುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ರ್ಖಗೆ ನೇತೃತ್ವದಲ್ಲಿ ಶರತ್ ಬಚ್ಚೇಗೌಡರ ಆಲೋಚನೆಯಿಂದ ಸಂಸ್ಥೆಗೆ ಹೊಸ ರೂಪ ಸಿಕ್ಕಿದೆ. ನಾವೆಲ್ಲರೂ ವಿದ್ಯುನ್ಮಾನ ತಂತ್ರಾನದಲ್ಲಿ ಬೆಳೆದಿದ್ದೇವೆ. ಇಡೀ ಪ್ರಪಂಚವೇ ಬೆಂಗಳೂರನ್ನು ನೋಡುವಂತಾಗಿದೆ. ನೂತನ ವೆಬ್ಸೈಟ್ ಮೂಲಕ ಅನೇಕ ಉದ್ದಿಮೆಗಳಿಗೆ ನೆರವಾಗಲಿದೆ ಎಂದು ಡಿಸಿಎಂ ಹೇಳಿದರು. ಕಿಯೋನಿಕ್ಸ್ ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕಗೊಂಡ ಸಿಬ್ಬಂದಿ ವರ್ಗದವರಿಗೆ ಡಿಸಿಎಂ ನೇಮಕಾತಿ ಪತ್ರ ವಿತರಿಸಿದರು. ಮಾಹಿತಿ ತಂತ್ರಾನ ಇಲಾಖೆ ಕಾರ್ಯದರ್ಶಿ ಎಕರೂಪ್ ಕೌರ್ ಮತ್ತಿತರರಿದ್ದರು.
ಪಾರದರ್ಶಕ ವ್ಯವಹಾರ: ಇ-ಪೋರ್ಟಲ್ನಲ್ಲಿ ಪಾರದರ್ಶಕ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗಲಿದೆ ಎಂದು ಕಿಯೋನಿಕ್ಸ್ ಅಧ್ಯ ಶರತ್ ಬಚ್ಚೇಗೌಡ ಹೇಳಿದರು. ಟೆಂಡರ್ ಪ್ರಕ್ರಿಯೆ ಸರಳೀಕರಣಗೊಳಿಸಲು ಮತ್ತು ಪಾರ್ದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂಪೂರ್ಣ ಪ್ರಕ್ರಿಯೆ ಡಿಜಿಟಲಿಕರಣಗೊಳಿಸಲಾಗುತ್ತಿದೆ. ಸರ್ಕಾರದ ಬೇರೆ ಇಲಾಖೆಗಳು ತಮಗೆ ಅವಶ್ಯವಾದ ಸಾಮಗ್ರಿಗಳನ್ನು ನಿಯಮಬದ್ಧವಾಗಿ ದರಗಳಲ್ಲಿ ಕೊಳ್ಳಲು ಅನುಕೂಲವಾಗುವಂತೆ ಪೋರ್ಟಲ್ ಸಿದ್ಧಪಡಿಸಿದ್ದೇವೆ. ಹೊಸ ರೂಪ ಮತ್ತು ಆಶಯಗಳೊಂದಿಗೆ ಸೇವೆಗೆ ಸಿದ್ಧವಾಗಿದ್ದೇವೆ ಎಂದರು.
ಇ-ಆಡಳಿತ ಯೋಜನೆ ಅನುಷ್ಠಾನ ಸೇರಿ ಮಾಹಿತಿ ತಂತ್ರಜ್ಞಾನ ಸೇವೆ ನೀಡುತ್ತಿರುವ ಕಿಯೋನಿಕ್ಸ್ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಹೊಸ ಇ-ಕಾಮರ್ಸ್ ಪೋರ್ಟಲ್ ಮೂಲಕ ಪರಿಹಾರ ಸಿಕ್ಕಿದೆ. ಎಲ್ಲ ವ್ಯವಹಾರಗಳು ಪಾರದರ್ಶಕತೆಯಿಂದ ನಡೆಯಲಿವೆ. ಇನ್ನಷ್ಟು ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ.
| ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ.