

ಹಳೆಯಂಗಡಿ: ಹಿರಿಯರು ಕಂಡುಕೊಂಡು ಬೆಳೆಸಿದ ಸಂಸ್ಕೃತಿ ಸಂಸ್ಕಾರಗಳ ಹೂರಣವರಿತು ಯುವ ಪೀಳಿಗೆಗೆ ಅರ್ಥೈಸುವ ಕಾರ್ಯ ಅಭಿನಂದನೀಯ ಎಂದು ರಮೇಶ್ ಪೂಜಾರಿ ಚೇಳಾಯರು ಹೇಳಿದರು.
ನಂದಿನಿ ಕ್ರಿಕೆಟರ್ಸ್ ಅರಂದ್ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ಕೆಡ್ಡಸ ಆಚರಣೆ ಹಾಗೂ ಸಂಘಟನೆಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ದೇವಿ ದಯಾಳ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಳೆಯಂಗಡಿ ಗ್ರಾ.ಪಂ.ಸದಸ್ಯೆ ಜಯಂತಿ, ಶ್ರೀ ಸತ್ಯ ಧರ್ಮ ದೇವಿ ದೇವಸ್ಥಾನ ಮುಕ್ಕ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಮಾನಾಥ್ ಸಿ., ಉದ್ಯಮಿ ನವೀನ್ ಚೇಳಾರು, ನಂದಿನಿ ಕ್ರಿಕೆಟರ್ಸ್ ಅರಂದ್ ಗೌರವಾಧ್ಯಕ್ಷ ವಿಟ್ಠಲ ದೇವಾಡಿಗ, ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ತಂಡದ ಕ್ಯಾಪ್ಟನ್ ಗೌತಮ್ ಉಪಸ್ಥಿತರಿದ್ದರು.
ಮುಕ್ಕ ಪ್ರೋಟೀನ್ಸ್ ಮತ್ತು ಭಾವ ಫಿಶ್ ಮಿಲ್ಲ್ ಸಹಕಾರದೊಂದಿಗೆ ಆರು ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ, ಆಕಾಶ್, ಸಹನಿಕಾ, ತ್ರಿಷಾ ನಳಿನಿ ದೇವಾಡಿಗ, ಮೋಕ್ಷಿತ್, ಧನುಷ್ ಲಕ್ಷ್ಮಣ್ ಮತ್ತು ಪ್ರಕೃತಿ ಅವರಿಗೆ 50,000 ರೂ.ಮೊತ್ತದ ಸ್ಕಾಲರ್ ಶಿಪ್ ವಿತರಣೆ ಮಾಡಲಾಯಿತು.
ಸಂಸ್ಥೆಯ ಸದಸ್ಯರು ಮತ್ತು ಕುಟುಂಬ ವರ್ಗದ ಸಾಧಕರನ್ನು ಗೌರವಿಸುವ ಸಲುವಾಗಿ ವೈದ್ಯಕೀಯ ಕ್ಷೇತ್ರದ ಸಾಧಕಿ ಪ್ರಕೃತಿ ಪ್ರದೀಪ್ ಪೂಜಾರಿ, ಕ್ರೀಡಾಕ್ಷೇತ್ರದ ರಾಷ್ಟ್ರಮಟ್ಟದ ಸಾಧಕರಾದ ಯಶವಂತ್ ಮತ್ತು ಸಂಪತ್ ಬೈಲಕೆರೆ ಹಾಗೂ 2024-2025ರ ತಂಡದ ಸಕ್ರಿಯ ಸದಸ್ಯರಾಗಿ ರೋಷನ್ ದೇವಾಡಿಗ ಮತ್ತು ರೋಹಿತ್ ಅವರನ್ನು ಗುರುತಿಸಿ ಗೌರವಿಸಲಾಯಿತು.
ಗೀತಾ ರಾಮಚಂದ್ರ ಪ್ರಾರ್ಥಿಸಿದರು. ಶಿವರಾಜ್ ಬಹುಮಾನ ವಿಜೇತರ ಪಟ್ಟಿ ಮಂಡಿಸಿದರು, ಭಾಸ್ಕರ್ ಅಮೀನ್ ನಿರೂಪಿಸಿದರು.