ಬೆಳ್ತಂಗಡಿ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ.1ರಿಂದ ಮಾ.5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಶಿಶಿಲ ಹಾಗೂ ಶಿಬಾಜೆ ಗ್ರಾಮಗಳ ಭಕ್ತರ ಸಮಾಲೋಚನಾ ಸಭೆ ನಡೆಯಿತು.
ಓಟ್ಲ ಬ್ರಹ್ಮ ಭೈದರ್ಕಳ ಗರಡಿಯ ಧರ್ಮದರ್ಶಿ ಜನಾರ್ದನ ಬಂಗೇರ ಅಧ್ಯಕ್ಷತೆ ವಹಿಸಿ ಜಾತ್ರೋತ್ಸವ ಆಮಂತ್ರಣ ಬಿಡುಗಡೆಗೊಳಿಸಿದರು. ಜಾತ್ರೋತ್ಸವ ಸಮಿತಿಯ ಧರ್ಮಸ್ಥಳ ವಲಯ ಸಂಚಾಲಕ ರೂಪೇಶ್ ಮಡಿಲು ಸೇವೆಯ ಮಾಹಿತಿ ನೀಡಿದರು. ವಲಯ ಸಂಚಾಲಕ ಸಂತೋಷ್ ಉಪ್ಪಾರ್ ಜಾತ್ರೋತ್ಸವದ ಮಾಹಿತಿ ನೀಡಿದರು.
ಶಿಶಿಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತಗೌಡ, ಶಿವರಾಮ ಪೂಜಾರಿ, ರತನ್ ಉಪ್ಪಾರು, ಎಲ್ಯಣ್ಣ ಪೂಜಾರಿ ಬೂಡುಜಾಲು, ಕೇಶವ ಗೌಡ, ಅಶೋಕ್ ಬಂಗೇರ, ರಮೇಶ್ ಬಂಗೇರ ಉಪಸ್ಥಿತರಿದ್ದರು.
ವಲಯ ಸಂಚಾಲಕ ಪುರುಷೋತ್ತಮ ಪೂಜಾರಿ ಧರ್ಮಸ್ಥಳ ಸ್ವಾಗತಿಸಿದರು. ರಮೇಶ್ ಬಂಗೇರ ವಂದಿಸಿದರು.

ಕಲಿಕೆ ಚೆನ್ನಾಗಿದ್ದರೆ ಗಳಿಕೆ ಉತ್ತಮ : ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಡಿ.ಹರ್ಷೇಂದ್ರ ಕುಮಾರ್ ಸಲಹೆ