

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಿ ದೇವಸ್ಥಾನ ಜಾತ್ರಾಮಹೋತ್ಸವ ಪ್ರಯುಕ್ತ ಶ್ರೀ ದೇವರ ವಿಶೇಷ ನರ್ತನ ಬಲಿ ಗುರುವಾರ ರಾತ್ರಿ ನಡೆಯಿತು.
ರಾತ್ರಿ ಮಹಾಪೂಜೆ ನಡೆದು ಬಲಿ ಹೊರಟು, ವಸಂತ ಕಟ್ಟೆ ಪೂಜೆ, ವಿಶೇಷ ನರ್ತನ ಬಲಿ ನಡೆಯಿತು. ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನೆರವೇರಿತು. ಬಳಿಕ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಹರಕೆ ಬಂದ ಸೀರೆಗಳ ಏಲಂ ನಡೆಯಿತು. ಶ್ರೀ ಚಂಡಿಕಾ ಪರಮೇಶ್ವರಿ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.