ಹುಲಿವೇಷಕ್ಕಿದೆ ಧಾರ್ಮಿಕ ಮಹತ್ವ : ವೆಂಕಟರಮಣ ಆಸ್ರಣ್ಣ ಅನಿಸಿಕೆ

New Project (50)
Published on

ಕಟೀಲು: ಹುಲಿವೇಷ ಎಂಬುವುದು ಮನರಂಜನೆಗೆ ಸೀಮಿತವಾಗದೆ ಧಾರ್ಮಿಕತೆಗೆ ಹತ್ತಿರವಾಗಿದೆ ಎಂದು ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.

ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ವತಿಯಿಂದ ಆಯೋಜಿಸಲಾದ ಹುಲಿವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಭಾರ ಎತ್ತುವ ಸ್ಪರ್ಧೆಯಲ್ಲಿ ಸಾಧನೆಗೈದ ಕೀರ್ತನ್ ಕಟೀಲ್ ಅವರನ್ನು ಗೌರವಿಸಲಾಯಿತು. ಉದ್ಯಮಿ ಗಿರೀಶ್ ಎಂ.ಶೆಟ್ಟಿ ಕಟೀಲು ಅಧ್ಯಕ್ಷತೆ ವಹಿಸಿದ್ದರು. ಕಮಲಾದೇವಿಪ್ರಸಾದ್ ಆಸ್ರಣ್ಣ, ಜಯರಾಮ ಮುಕಾಲ್ದಿ ಕೊಡೆತ್ತೂರು ಭಂಡಾರಮನೆ, ಕಿಶೋರ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ನಾಗರಾಜ ರಾವ್ ಅಜಾರು, ಉದ್ಯಮಿ ಲೋಕಯ್ಯ ಸಾಲಿಯಾನ್ ಕೊಂಡೇಲ, ಮೋಹನ್ ಶೆಟ್ಟಿ ಮೂಡು ದೇವಸ್ಯ, ತಿಮ್ಮಪ್ಪ ಮೇಸ್ತ್ರಿ, ಗಣೇಶ್ ಶೆಟ್ಟಿ ಮಿತ್ತಲ್ಲ ಗುತ್ತು, ವೆಂಕಟೇಶ್ ಭಟ್ ಪಾವಂಜೆ, ಕೆ.ಕೆ.ಪೇಜಾವರ, ಮುಂಬೈ ಸಮಿತಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಗಂಪ, ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ದೊಡ್ಡಯ್ಯ ಮೂಲ್ಯ ಕಟೀಲು ಮತ್ತಿತರರು ಉಪಸ್ಥಿತರಿದ್ದರು.

ಕೇಶವ ಕಟೀಲು ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರು ನಿರೂಪಿಸಿದರು. ನಂತರ ಹುಲಿ ವೇಷ ಸ್ಪರ್ಧೆ ಮತ್ತು ತೆಂಕು-ಬಡಗು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net