

ಕಾಸರಗೋಡು: ಮನೆ ಸನಿಹದ ಬಾವಿಯ ಮೇಲ್ಭಾಗದಿಂದ ಹಾದುಹೋಗಿದ್ದ ವಿದ್ಯುತ್ ತಂತಿಗೆ ಸಿಲುಕಿಕೊಂಡಿದ್ದ ತೆಂಗಿನಗರಿ ತೆಗೆಯಲು ಬಾವಿ ಕಟ್ಟೆಯೇರಿದ್ದ ಸಂದರ್ಭ ಆಯತಪ್ಪಿ ಬಿದ್ದ ವಿದ್ಯಾರ್ಥಿ ಮತಪಟ್ಟಿದ್ದಾನೆ. ಉದುಮ ನಾಲಾಂವಾದುಕ್ಕಲ್ ವಲಿಯ ವಳಪ್ಪ್ ನಿವಾಸಿ, ಹೋಟೆಲ್ ಮಾಲೀಕ ಅರವಿಂದನ್- ಅಂಬುಜಾಕ್ಷಿ ದಂಪತಿ ಪುತ್ರ ಅಶ್ವಿನ್(18) ಮೃತಪಟ್ಟ ವಿದ್ಯಾರ್ಥಿ. ಬಾವಿಗೆ ಬಿದ್ದ ಅಶ್ವಿನ್ ಅವರನ್ನು ಅಗ್ನಿಶಾಮಕ ದಳದ ನೆರವಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ.