ಮಂಗಳೂರಿಗೆ ಐಟಿ ಉದ್ಯೋಗಿಗಳ ಆಕರ್ಷಣೆ ವಿಶೇಷ ಒತ್ತು ರೋಹಿತ್ ಭಟ್ ಮಾಹಿತಿ

mng--25 Sep wrk
Published on

ಮಂಗಳೂರು: ದಕ್ಷಿಣ ಕನ್ನಡದ ಹೊರಗಿನ ವಿವಿಧ ಸಂಸ್ಥೆಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಆರು ಮಂದಿ ಐಟಿ ಉದ್ಯೋಗಿಗಳು ಮಂಗಳೂರಿಗೆ ಮರಳಿ ಬಂದಿದ್ದಾರೆ. ಈ ಮೂಲಕ ಇನ್ನಷ್ಟು ಅವಿಭಜಿತ ಕರಾವಳಿಯ ಮಂದಿ ಹೊರ ಭಾಗದಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳನ್ನು ಆಕರ್ಷಣೆ ಮಾಡಲು ಎಲ್ಲ ಪ್ರಯತ್ನಗಳು ಸಾಗುತ್ತಿದೆ ಎಂದು ಸಿಲಿಕಾನ್ ಬೀಚ್ ಸ್ಥಾಪಕ ಸದಸ್ಯ, ವರ್ಕ್ ವರ್ಕ್ ಸಂಸ್ಥಾಪಕ ರೋಹಿತ್ ಭಟ್ ಹೇಳಿದರು.

ಅವರು ವರ್ಕ್ ವರ್ಕ್ ಐಟಿ ಕಂಪನಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ತಿಂಗಳ ಅಂತರದಲ್ಲಿ 6 ಮಂದಿ ಐಟಿ ಉದ್ಯೋಗಿಗಳು ಮರಳಿ ಬಂದಿದ್ದಾರೆ. ಅವರು ಉನ್ನತ ಹುದ್ದೆಗಳನ್ನು ಮಾತ್ರವಲ್ಲದೆ ಅವರ ಹಿಂದಿನ ವೇತನ ಪ್ಯಾಕೇಜ್‌ಗಳಿಗೆ ಹೋಲಿಸಿದರೆ ಉತ್ತಮ ಪ್ಯಾಕೇಜ್‌ವನ್ನು ಮಂಗಳೂರಿನಲ್ಲಿ ಪಡೆದಿದ್ದಾರೆ. ಇದರೊಂದಿಗೆ, ಮಂಗಳೂರು ವೇತನ ಕಳಪೆಯಾಗಿದೆ ಎಂಬ ಸಿದ್ಧಾಂತವನ್ನು ನಾವು ತಳ್ಳಿಹಾಕಿದ್ದೇವೆ. ಹಲವಾರು ಸುತ್ತಿನ ಸಂದರ್ಶನಗಳು ನಡೆದು ಲಿತಾಂಶಕ್ಕಾಗಿ ಕಾಯುತ್ತಿರುವ ಇನ್ನೂ ಅನೇಕರು ಇದ್ದಾರೆ. ತಮ್ಮ ಊರಿಗೆ ಬಹಳ ವರ್ಷಗಳ ನಂತರ ಬರಲು ನಿರ್ಧಾರ ಮಾಡಿದ್ದಾರೆ ಎಂದರು.

ವಿಶ್ವಮಟ್ಟದ ಸವಲತ್ತುಗಳು ಮಂಗಳೂರಿನಲ್ಲಿ ನೀಡಲು ಸಾಧ್ಯವಾದರೆ ಅದೇ ಮಾದರಿಯ ಕಂಪನಿಗಳು ಇಲ್ಲಿಗೆ ಬರಲು ಮುಂದಾಗುತ್ತಾರೆ. ನಾವು ಕೂಡ ಅಂತಹ ವ್ಯವಸ್ಥೆಯನ್ನು ಸೃಷ್ಟಿಮಾಡಬೇಕು. ಈಗಾಗಲೇ ರಾಜ್ಯದ ಐಟಿ ಬಿಟಿ ಸಚಿವರು ಕೂಡ ಐಟಿ ಪಾರ್ಕ್ ಮಾಡುವ ಕುರಿತು ಭರವಸೆ ನೀಡಿದ್ದಾರೆ. ಖಾಸಗಿ ವಲಯದಿಂದಲ್ಲೂ ಇದು ನಡೆಯುತ್ತಿದೆ. ಎಲ್ಲವೂ ಜತೆಗೂಡಿದಾಗ ಮಂಗಳೂರು ಸಿಲಿಕಾನ್ ಬೀಚ್ ಆ್ ಇಂಡಿಯಾ ಆಗಲು ಸಾಧ್ಯವಿದೆ ಎಂದರು.

ಇದೇ ಸಂದರ್ಭ ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಮಂಗಳೂರಿನ ಕಚೇರಿಯಲ್ಲಿ 850 ಉದ್ಯೋಗಿಗಳನ್ನು ತಲುಪಿರುವುದರಿಂದ, ಕಂಪನಿಯು ನೇಮಕಾತಿಯನ್ನು ಸ್ಥಿರಗೊಳಿಸಲು ಮತ್ತು ತನ್ನ ನೆಲೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ತನ್ನ ಕಾರ್ಯಪಡೆಯನ್ನು ದ್ವಿಗುಣಗೊಳಿಸಲು ಯೋಜಿಸಿದೆ ಎಂದು ಇಜಿಎಎಸ್ ಗ್ಲೋಬಲ್ ಸಿಇಒ ಮಿಕೆಲ್ ಬರ್ದ್ರಾಮ್ ಹೇಳಿದರು.

ಮಂಗಳೂರು ಕಚೇರಿಯಲ್ಲಿ ಶೇ. 60 ಸ್ಥಳೀಯ ಸಿಬ್ಬಂದಿ, ಶೇ.20 ದಕ್ಷಿಣ ಕನ್ನಡ ಮತ್ತು ಉಡುಪಿಯ ಹೊರಗಿನವರು ಮತ್ತು ಶೇ.20ರಷ್ಟು ಕರ್ನಾಟಕದ ಹೊರಗಿನವರು ಇದ್ದಾರೆ. ನಮ್ಮ ಕಾರ್ಯಪಡೆಯ ಸುಮಾರು ಶೇ.50 ಹೊಸಬರಿದ್ದಾರೆ ಎಂದರು. ಈ ಸಂದರ್ಭ ಇಜಿ ಇಂಡಿಯಾ ಸಿಇಒ ಆನಂದ್ ರ್ನಾಂಡೀಸ್ ಹಾಗೂ ಸಿಇಒ ಡೀನ್ ಗೊನ್ಸಾಲ್ವೀಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net