ಶೌಚಗೃಹದಲ್ಲಿ ಬಾಲಕಿಯ ವಿಡಿಯೋ ಮಾಡಿದ್ದ ಯುವಕನ ಶವ ಕಂಡು ಬೆಚ್ಚಿದ ಜನ: ಆರೋಪಿ ಸತ್ತಿದ್ಹೇಗೆ?

Man death
Published on

ಉಡುಪಿ: ಕಾಸರಗೋಡಿನ ಪೊಕ್ಸೊ ಆರೋಪಿಯೊಬ್ಬ ಉಡುಪಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.

ಕೂಡ್ಲು ಕಾಳ್ಯಾಂಗಾಡ್​ನ ಮಹೇಶ್( 28) ಫೋಕ್ಸೋ ಆರೋಪಿ. ಶೌಚಗೃಹದಲ್ಲಿ ಬಾಲಕಿಯ ವಿಡಿಯೋ ಮಾಡಿದ್ದ ಆರೋಪಿ, ಜುಲೈ 22ರಂದು ಕಾಸರಗೋಡು ಬಂದರಿನ ಬಳಿ ವಿಚಾರಣೆ ವೇಳೆ ಸಮುದ್ರಕ್ಕೆ ಹಾರಿದ್ದ. ಸಾಕಷ್ಟು ಹುಡುಕಾಡಿದ್ದರು ಕೂಡ ಆರೋಪಿಯ ಪತ್ತೆಯಿರಲಿಲ್ಲ.

ಇದಾದ ಬಳಿಕ ಆತನ ಬಗ್ಗೆ ಉಡುಪಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇಂದು ಆರೋಪಿಯ ಶವ ಕೊಳೆತ ಸ್ಥಿತಿಯಲ್ಲಿ ಹಾಗೂ ಅರ್ಧ ಅಸ್ಥಿಪಂಜರ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಲ ತೀರದಲ್ಲಿ ಬಿದ್ದಿದ ಶವವನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದ್ದು, ಶವದಲ್ಲಿದ್ದ ಬಟ್ಟೆ ಮತ್ತು ಕೈಕೋಳ ಗಮನಿಸಿ ಶವ ಚಹರೆಯನ್ನು ಪತ್ತೆಹಚ್ಚಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net