ಹೊಟ್ಟೆ ನೋವೆಂದು ಹೆರಿಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಆಪರೇಷನ್​ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

Woman
Published on

ಶಿಲ್ಲಾಂಗ್​: ಮೇಘಾಲಯದ ವೆಸ್ಟ್​ ಗಾರೋ ಹಿಲ್ಸ್​ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಹೊಟ್ಟೆ ನೋವೆಂದು ದಾಖಲಾದ ಮಹಿಳೆಯ ಆಪರೇಷನ್​ ನಡೆಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು.

ಹೌದು. ಈಸ್ಟ್​ ಗಾರೋ ಹಿಲ್ಸ್​ ಜಿಲ್ಲೆಯ ಜಾಮ್ಗೆ ಗ್ರಾಮದ 37 ವರ್ಷದ ಮಹಿಳೆ ತೀವ್ರ ಹೊಟ್ಟೆ ನೋವಿನ ಬಳಿಕ ಜುಲೈ 29ರಂದು ತುರಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಇಬ್ಬರು ಸ್ತ್ರೀರೋಗತಜ್ಞರು ಸೇರಿದಂತೆ ವೈದ್ಯರ ತಂಡದೊಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಆಗಸ್ಟ್​ 3ರಂದು ಸುಮಾರು 3 ಗಂಟೆಗಳ ಕಾಲ ನಡೆದ ಆಪರೇಷನ್​ ಯಶಸ್ವಿಯಾಗಿರುವುದಾಗಿ ಆಸ್ಪತ್ರೆಯ ಸೂಪರಿಂಟೆಂಡೆಂಟ್​ ಡಾ. ಐಸಿಲ್ಡಾ ಸಂಗ್ಮಾ ತಿಳಿಸಿದ್ದಾರೆ.

ಅಂದಹಾಗೆ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 24 ಕೆ.ಜಿ ತೂಕದ ಗಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸದ್ಯ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ವೈದ್ಯರ ನಿಗಾದಲ್ಲಿ ಇಡಲಾಗಿದೆ. ತಗೆಯಲಾಗಿರುವ ಗಡ್ಡೆಯು ಕ್ಯಾನ್ಸರ್​ಕಾರಕವಾ? ಎಂದು ತಿಳಿಯಲು ರೋಗಪತ್ತೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಂಗ್ಮಾ ಮಾಹಿತಿ ನೀಡಿದರು.

ಆಪರೇಷನ್​ ವೇಳೆ ವೈದ್ಯರೊಬ್ಬರು ರೋಗಿಗೆ ರಕ್ತದಾನ ಕೂಡ ಮಾಡಿದ್ದಾರೆ. ಅಲ್ಲದೆ, ಕೆಲ ಸಮುದಾಯದ ಸದಸ್ಯರು ಮಹಿಳೆಯ ಆಪರೇಷನ್​ಗೆ ಆರ್ಥಿಕ ಸಹಾಯ ನೀಡಲು ಮುಂದೆ ಬರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ನಡೆಯನ್ನು ವೆಸ್ಟ್​ ಗಾರೋ ಹಿಲ್ಸ್​ ಜಿಲ್ಲಾಧಿಕಾರಿ ರಾಮ್​ ಸಿಂಗ್​ ಶ್ಲಾಘಿಸಿದ್ದಾರೆ.

ಇದೇ ಅಲ್ಲದೆ, ತುರಾ ಆಸ್ಪತ್ರೆಯ ಸಿಬ್ಬಂದಿಯುವ ಮಹಿಳೆಯ ಹೊಟ್ಟೆಯಿಂದ 24 ಕೆ.ಜಿ ತೂಕದ ಗಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಡಾ. ವಿನ್ಸ್​ ಮೊಮಿನ್​ ಮತ್ತು ಯಶಸ್ವಿ ಆಪರೇಷನ್​ನಲ್ಲಿ ತೊಡಗಿಕೊಂಡಿದ್ದ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತಾ, ರೋಗಿಯ ಶೀಘ್ರ ಚೇತರಿಕೆ ಪಾರ್ಥಿಸುತ್ತೇನೆಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಪ್ರಶಂಸಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net