

ಕಾಸರಗೋಡು: ಕೇರಳದ ವಿವಿಧ ಜಿಲ್ಲೆಗಳಿಂದ ಶಾಸಕರನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಸಾಮರ್ಥ್ಯ ಬಿಜೆಪಿ ಪಕ್ಷಕ್ಕಿದೆ ಎಂದು ರಾಜ್ಯಸಭಾ ಸದಸ್ಯ ಸಿ. ಸದಾನಂದನ್ ಹೇಳಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಪೂರ್ಣ ಕಾಸರಗೋಡು ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೋಶದ ಸಂಯೋಜಕ ವಿ.ಕೆ.ಸಜೀವನ್, ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ರವೀಶ ತಂತ್ರಿ ಕುಂಟಾರು, ಸವಿತಾ, ಸತೀಶ್ಚಂದ್ರ ಭಂಡಾರಿ, ರಾಮಪ್ಪ ಮಂಜೇಶ್ವರ, ಎ.ವೇಲಾಯುಧನ್, ವಕೀಲ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್, ರಾಜ್ಯ ಸಮಿತಿ ಸದಸ್ಯರಾದ ಕೊವ್ವಲ್ ದಾಮೋದರನ್, ರೂಪವಾಣಿ ಆರ್.ಭಟ್, ಶಿವಕೃಷ್ಣ ಭಟ್, ವಕೀಲ ಬಿ.ರವೀಂದ್ರನ್, ಹರೀಶ್ಚಂದ್ರ ಮೊದಲಾದವರಿದ್ದರು.