ಹಿಂದುಳಿದವರಿಗೆ ಸಹಾಯ ಮಾಡುವ ಗುಣವಿರಲಿ : ಸದಾಶಿವ ಉಳ್ಳಾಲ್ ಆಶಯ

New Project (2)
Published on

ಉಳ್ಳಾಲ: ನಾವು ಉನ್ನತ ಶಿಕ್ಷಣ ಪಡೆದರೂ, ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಈ ಮಟ್ಟಕ್ಕೆ ತಲುಪಲು ಶೈಕ್ಷಣಿಕ ಜೀವನದಲ್ಲಿ ನಮಗೆ ಕಿಂಚಿತ್ ಸಹಾಯ ಮಾಡಿದವರನ್ನೂ ನೆನಪಿಸಿ ಸಮಾಜದಲ್ಲಿ ಹಿಂದುಳಿದವರಿಗೆ ಸಹಾಯ ಮಾಡುವ ದೊಡ್ಡ ಗುಣ ಹೊಂದಿರಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದರು.

ಅಸೈಗೋಳಿಯ ಕಾರುಣ್ಯ ಫೌಂಡೇಷನ್ ವತಿಯಿಂದ ಅಸೈಗೋಳಿ ಲಯನ್ಸ್ ಸೇವಾ ಸದನದಲ್ಲಿ ಭಾನುವಾರ ಎರಡನೇ ವರ್ಷದ ‘ಕಾರುಣ್ಯೋತ್ಸವ-2025’ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾನೀರ್ ದಯಾಮಾತೆ ದೇವಾಲಯದ 21 ಅಯೋಗಗಳ ಸಂಯೋಜಕ ರೊನಾಲ್ಡ್ ಪ್ರಕಾಶ್ ಮಾತನಾಡಿ, ಮಾನವೀಯತೆ ಇರುವಲ್ಲಿ ಕರುಣೆ ಇದ್ದೇ ಇರುತ್ತದೆ. ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯಕ್ರಮ ಕರುಣೆಯ ಭಾಗ ಎಂದರು.

ಕಾರುಣ್ಯ ಫೌಂಡೇಷನ್ ಗೌರವಾಧ್ಯಕ್ಷ ಆನಂದ ಕೆ.ಅಸೈಗೋಳಿ ಅಧ್ಯಕ್ಷತೆ ವಹಿಸಿದ್ದರು. ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ., ಕೊಣಾಜೆ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಭಾಸ್ಕರ ಅರಸರಮೂಲೆ, ಅಸೈಗೋಳಿ ಪರಂಜ್ಯೋತಿ ಮಾತೃಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ, ಮಂಗಳಗಂಗೋತ್ರಿ ಜೆಸಿಐ ಪೂರ್ವಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿದರು. ಅಧ್ಯಕ್ಷ ಅರುಣ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮನಾ ಅಸೈಗೋಳಿ, ಹರೀಶ್ ಮಾಸ್ಟರ್ ಹಾಗೂ ಲಾವಣ್ಯ ಸನ್ಮಾನಪತ್ರ ವಾಚಿಸಿದರು. ಕೋಶಾಧಿಕಾರಿ ಸುಧಾಕರ ನಾಯಕ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ನಾಯಕ್ ನಿರೂಪಿಸಿದರು.

ಕಾರುಣ್ಯ ಪ್ರಶಸ್ತಿ ಪ್ರದಾನ

ನಿವೃತ್ತ ಶಿಕ್ಷಕಿ ಬೆನ್ನಿ ಡಿಸೋಜ, ಸಾಮಾಜಿಕ ಮುಖಂಡ ಸುರೇಶ್ ಅಸೈ ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಗಾರ ಖಲೀಲ್ ಕೈರಂಗಳ ಅವರಿಗೆ ಕಾರುಣ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ನಿಶಾ ಅಂಜುಮ್, ಪ್ರಜನ್ಯಾ, ಲಾವಣ್ಯ, ಮತ್ತು ಶ್ರೇಯಾ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ತೃಷಾ, ಭೂಮಿಕಾ ಅವರಿಗೆ ಕಾರುಣ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net