ನಾಗಪಟ್ಟಣ ಡ್ಯಾಂನ ಷಟರ್ ತೆರವು : ಅಪಾರ ಪ್ರಮಾಣದಲ್ಲಿ ನೀರು ಹೊರಕ್ಕೆ

New Project (40)
Published on

ಸುಳ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಗಪಟ್ಟಣ ಬಳಿಯಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ವೆಂಟೆಡ್ ಡ್ಯಾಂನ ಷಟರ್‌ಗಳನ್ನು ತೆರೆಯಲಾಗಿದೆ.

ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುವ ಡ್ಯಾಂನ ಷಟರ್ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ತಂತ್ರಜ್ಞರ ತಂಡ ಡ್ಯಾಂನ ಷಟರ್‌ಗಳನ್ನು ಭಾನುವಾರ ಸಂಜೆ ತೆರೆದರು. ಪಯಸ್ವಿನಿ ನದಿ ಮೈ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಜಾಗರೂಕರಾಗಿ ಇರುವಂತೆ ಹಾಗೂ ಬಟ್ಟೆ ಒಗೆಯಲು, ಸ್ನಾನ ಮಾಡಲು ಮತ್ತಿತರ ಅಗತ್ಯಗಳಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಸ್ಥಳೀಯಾಡಳಿತ ಸೂಚಿಸಿದೆ.

ಬೇಸಿಗೆಯಲ್ಲಿ 12 ಷಟರ್‌ಗಳನ್ನು ಹಾಕಿ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಇದೀಗ ಮಳೆಗಾಲ ಆರಂಭಗೊಂಡ ಹಿನ್ನೆಲೆಯಲ್ಲಿ ಎಲ್ಲ ಷಟರ್‌ಗಳನ್ನು ಓಪನ್ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net