ಕರ್ನಾಟಕ ವಿಧಾನಸಭಾ ಚುನಾವಣೆ ಗೋವಾದಲ್ಲೂ ರಜೆ-ಅಲ್ಲಿನ ಸರ್ಕಾರದ ನಿರ್ಧಾರಕ್ಕೆ ಹಲವರ ಆಕ್ಷೇಪ

Goa CM Pramod Savant Speaking with press
Published on

ಕಾರವಾರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಗೋವಾ ( Goa ) ರಾಜ್ಯದಲ್ಲಿ ಮೇ 10 ರಂದು ವೇತನ ಸಹಿತ ರಜೆ ಘೋಷಿಸಲಾಗಿದೆ.

ಇದು ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ, ಕೈಗಾರಿಕೆ ಹಾಗೂ ಖಾಸಗಿ ಉದ್ಯೋಗದಲ್ಲಿದ್ದವರಿಗೂ ಅನ್ವಯವಾಗಲಿದೆ ಎಂದು ಗೋವಾ ಸರ್ಕಾರ ಸೋಮವಾರ ಪ್ರಕಟಣೆ ಹೊರಡಿಸಿದೆ.

ಗೋವಾದಲ್ಲಿ ಸುಮಾರು 3 ಲಕ್ಷದಷ್ಟು ಕನ್ನಡಿಗ ಮತದಾರರಿದ್ದಾರೆ. ವಾಸ್ಕೋ, ಮಡಗಾಂವ ಸೇರಿ ವಿವಿಧೆಡೆ ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಮಂಗಳೂರು ಸೇರಿ ವಿವಿಧೆಡೆಯ ಜನ ಖಾಸಗಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲವು ಸರ್ಕಾರಿ ಹುದ್ದೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರು ಮತದಾರರಿಗಾಗಿ ಬಸ್ ವ್ಯವಸ್ಥೆ ಮಾಡಿದ್ದು, ಬಂದು ಮತದಾನ ಮಾಡಿ ಹೋಗುವಂತೆ ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ವಿರೋಧ:
ಆದರೆ,( Goa ) ಗೋವಾ ಬಿಜೆಪಿ ಸರ್ಕಾರದ ಈ ನಿಲುವಿಗೆ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಗೋವಾ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ.

ಗೋವಾ ಕೈಗಾರಿಕೆಗಳ ಸಂಘಟನೆಯ ಅಧ್ಯಕ್ಷ ದಾಮೋದರ ಕೋಚಕರ್ ಇದೊಂದು ಅಸಂಬದ್ಧ ನಿರ್ಣಯವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಕಳೆದ ವರ್ಷ ಗೋವಾದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕವೂ ವೇತನ ಸಹಿತ ರಜೆ ಘೋಷಿಸಿತ್ತು ಎಂದು ಗೋವಾ ಕೈಗಾರಿಕಾ ಸಚಿವ ಮೌವಿನ್ ಗಿಡ್ಹಿನೋ ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net