ಸಿನಿಮಾ

ವಿಧಾನಸಭೆ ಚುನಾವಣೆ -ಮತಗಟ್ಟೆಗಳಲ್ಲಿ ಪ್ರತಿಷ್ಠಾಪನೆಗೊಂಡ ಮತ ಯಂತ್ರಗಳು

ಕಾರವಾರ: ಪ್ರಜಾಪ್ರಭುತ್ವದ ಹಬ್ಬ ವಿಧಾನಸಭೆ ಚುನಾವಣೆ ಸಕಲ ಸಿದ್ಧತೆಗಳು ಮಂಗಳವಾರ ಪೂರ್ಣಗೊಂಡಿದ್ದು, ಮತ ಯಂತ್ರಗಳು ಮತಗಟ್ಟೆಯಲ್ಲಿ ಪ್ರತಿಷ್ಠಾಪನೆಗೊಂಡಿವೆ.

ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಮಸ್ಟರಿಂಗ್‌ ಕೇಂದ್ರಗಳಿಂದ ಸಲಕರಣೆಗಳನ್ನು ಪಡೆದು ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ತೆರಳಿದರು.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1435 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಪಿಆರ್‌ಒ, ಒಬ್ಬ ಎಆರ್‌ಒ, ಒಂದು ಮತಗಟ್ಟೆಗೆ ಇಬ್ಬರಂತೆ ಒಟ್ಟು 3546 ಸಿಬ್ಬಂದಿ ಸೇರಿ ಒಟ್ಟು, 6416 ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯನ್ನು ಒಟ್ಟು 261 ಕ್ಲಸ್ಟರ್ ಗಳನ್ನು ಒಡೆಯಲಾಗಿದ್ದು, ಪ್ರತಿ ಐದಾರು ಮತಗಟ್ಟೆಗೆ ಒಬ್ಬ ಕ್ಲಸ್ಟರ್ ಅಧಿಕಾರಿಯನ್ನು ನೇಮಿಸಲಾಗಿದೆ.

ಮತಗಟ್ಟೆಯಲ್ಲಿ ಮತ ಯಂತ್ರಗಳು ಕೈಕೊಟ್ಟರೆ ನೋಡಿಕೊಳ್ಳುವುದು, ಮತದಾನದ ಅವಧಿಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡುವುದು ಕ್ಲಸ್ಟರ್ ಅಧಿಕಾರಿಯ ಜವಾಬ್ದಾರಿಯಾಗಿದೆ.

ವಿಶೇಷ ಮತ ಗಟ್ಟೆಗಳು:


ಪ್ರತಿ ಕ್ಷೇತ್ರಗಳಲ್ಲಿ 2 ಅಂಗವಿಕಲ ಮತಗಟ್ಟೆಗಳು, 2 ಯುವ ಅಧಿಕಾರಿ, ಸಿಬ್ಬಂದಿ ಇರುವ ಮತಗಟ್ಟೆಗಳು, 2 ಸಾಂಸ್ಕೃತಿಕ ಕಲೆ ಬಿಂಬಿಸುವ ಮತಗಟ್ಟೆಗಳು, 5 ಮಹಿಳಾ ಸಿಬ್ಬಂದಿಯ ಮತಗಟ್ಟೆಗಳನ್ನು ತೆರೆಯಲಾಗಿದೆ. ಅವು ಸಾಮಾನ್ಯಕ್ಕಿಂದ ಭಿನ್ನವಾಗಿರಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

  • ಮಸ್ಟರಿಂಗ್ ಕೇಂದ್ರಗಳು
  • ಹಳಿಯಾಳ-ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹವಗಿ, ಹಳಿಯಾಳ
  • ಕಾರವಾರ-ಸೇಂಟ್ ಮೈಕಲ್ ಕಾನ್ವೆಂಟ್ ಹೈಸ್ಕೂಲ್, ಕಾರವಾರ
  • ಕುಮಟಾ-ಡಾ.ಎ.ವಿ.ಬಾಳಿಗಾ ಕಾಮರ್ಸ್ ಕಾಲೇಜ್ ಕುಮಟಾ
  • ಭಟ್ಕಳ-ಶ್ರೀ ಗುರು ಸುಧೀಂದ್ರ ಕಾಲೇಜ್ ಭಟ್ಕಳ
  • ಶಿರಸಿ-ಮಾರಿಕಾಂಬಾ ಪಿಯು ಕಾಲೇಜ್ ಶಿರಸಿ
  • ಯಲ್ಲಾಪುರ-ವೈಟಿಎಸ್‌ಎಸ್ ಎಜುಕೇಶನ್ ಸೊಸೈಟಿ ಯಲ್ಲಾಪುರ


ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ. ನ್ಯಾಯ ಸಮ್ಮತ ಹಾಗೂ ಪಕ್ಷಪಾತವಿಲ್ಲದ ಚುನಾವಣೆ ನಡೆಯಲಿದ್ದು, ಜನ ಸಕಾಲಕ್ಕೆ ಬಂದು ಮತ ಚಲಾಯಿಸಬೇಕು.
ಪ್ರಭುಲಿಂಗ ಕವಳಿಕಟ್ಟಿ
ಜಿಲ್ಲಾಧಿಕಾರಿ, ಉತ್ತರ ಕನ್ನಡ

……..

Latest Posts

ಲೈಫ್‌ಸ್ಟೈಲ್