

ಕಾರ್ಕಳ: ಕಾರ್ಕಳ ತಾಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಕಳ ತಾಲೂಕಿನ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಶುಕ್ರವಾರ ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಕಚೇರಿಯಲ್ಲಿ ನಡೆದ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ 41 ಕಡತಗಳನ್ನು ಸಮಿತಿ ಮುಂದೆ ಮಂಡಿಸಲಾಗಿದ್ದು, ಈ ಪೈಕಿ 32 ಕಡತಗಳಿಗೆ ಮಂಜೂರಾತಿಗೆ ಶಿಫಾರಸು ಮಾಡಲಾಯಿತು. ಸುಮಾರು ವರ್ಷಗಳಿಂದ ಮಂಜೂರಾತಿಗೆ ಬಾಕಿ ಇರುವ ಅರ್ಹ ಅಕ್ರಮ ಸಕ್ರಮ ಅರ್ಜಿಗಳನ್ನು ಆದಷ್ಟು ಬೇಗ ತನಿಖೆ ನಡೆಸಿ ಮಂಜೂರಾತಿಗೆ ಕ್ರಮವಹಿಸಲು ಸೂಚಿಸಿದರು.
ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ಪ್ರದೀಪ್ ಆರ್., ಸಮಿತಿ ಸದಸ್ಯ ನವೀನ್ ದೇವಾಡಿಗ, ರಮೇಶ್ ಬಜಕಳ, ಸುನಿತಾ ಶೆಟ್ಟಿ, ಉಪ ತಹಸೀಲ್ದಾರ್ ಮಂಜುನಾಥ್ ನಾಯಕ್, ವಿಷಯ ನಿರ್ವಾಹಕ ತಾರೇಶ್, ಪೂಜಾ, ಕಾರ್ಕಳ ಮತ್ತು ಅಜೆಕಾರು ಹೋಬಳಿ ಕಂದಾಯ ನಿರೀಕ್ಷಕರು ಹಾಗೂ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು, ತಾಂತ್ರಿಕ ಸಮಾಲೋಚಕರು ಉಪಸ್ಥಿತರಿದ್ದರು.
\