

ಕೋಟ: ಶಾಲೆಗಳಲ್ಲಿ ಶಿಕ್ಷಣ ಪ್ರಗತಿ ಸಾಧಿಸುವಲ್ಲಿ ಸಾಕ್ಷರತಾ ಇಲಾಖೆ ಶೈಕ್ಷಣಿಕ ಚಿಂತನೆ ಮಾಡುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಸುಧಾರಣೆಯಲ್ಲಿ ಶಿಕ್ಷಕರಿಗೆ ಮಾಹಿತಿ ದೊರಕುವಲ್ಲಿ ಕಾರ್ಯಾಗಾರ ಅನುಕೂಲವಾಗುತ್ತದೆ ಎಂದು ಬ್ರಹ್ಮಾವರ ಸಮೂಹ ಸಂಪನ್ಮೂಲ ಕೇಂದ್ರ ಬಿ.ಆರ್.ಪಿ ಉದಯ ಕೋಟ ಹೇಳಿದರು.
ಸರ್ಕಾರಿ ಪ್ರೌಢಶಾಲೆ ಮಣೂರು ಪಡುಕರೆಯಲ್ಲಿ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ ಸಿ.ಕುಂದರ್ ಪ್ರಾಯೋಜನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ ವಲಯ ಸಹಭಾಗಿತ್ವದಲ್ಲಿ, ಆಂಗ್ಲ ಭಾಷಾ ಕ್ಲಬ್ ಮಣೂರು ಪಡುಕರೆ ಆಯೋಜನೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಇಂಗ್ಲಿಷ್ ವರ್ಕ್‌ಶಾಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಣೂರು ಪ್ರೌಢಶಾಲೆ ಹಿರಿಯ ಸಹಶಿಕ್ಷಕ ರಾಮದಾಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಆವರ್ಸೆ ಪ್ರೌಢಶಾಲೆ ಸಹಶಿಕ್ಷಕ ಶಶಿಧರ ಶೆಟ್ಟಿ, ಕೆ.ಪಿ.ಎಸ್ ಪ್ರೌಢಶಾಲೆ ಬ್ರಹ್ಮಾವರ ಸಹಶಿಕ್ಷಕ ಗಣಪತಿ, ನುಕ್ಕೂರು ಪ್ರೌಢಶಾಲೆ ಸಹ ಶಿಕ್ಷಕ ರವಿ ನಾಯಕ್, ನಾಲ್ಕೂರು ಪ್ರೌಢಶಾಲೆ ಸಹಶಿಕ್ಷಕಿ ಜಯ, ಉಡುಪಿ ಜಿಲ್ಲಾ ಸಹಶಿಕ್ಷಕ್ಷ ಸಂಘ ಉಪಾಧ್ಯಕ್ಷ ಆನಂದ ಶೆಟ್ಟಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಶಿಕ್ಷಕಿ ರೂಪಾ ನಿರೂಪಿಸಿದರು. ಸಹಶಿಕ್ಷಕ ಹೆರಿಯ ವಂದಿಸಿದರು.