ಸರ್ಕಾರದ ಸೌಲಭ್ಯ ಸಮರ್ಪಕ ಬಳಕೆ

kotata
Published on

ಕೋಟ: ವಿಶೇಷಚೇತನರು ಯಾವ ರೀತಿಯಲ್ಲೂ ಇತರರಿಗೆ ಕಡಿಮೆ ಸಾಮರ್ಥ್ಯ ಹೊಂದಿಲ್ಲ. ಭಾರತೀಯ ಆಡಳಿತಾತ್ಮಕ ಸೇವೆ ಸೇರಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಜನಸೇವೆ ಮಾಡುವ ಅರ್ಹತೆ ಅವರಲ್ಲಿದೆ. ಸರ್ಕಾರದ ಸೌಲಭ್ಯ ಸಮರ್ಪಕ ಬಳಕೆ ಅಗತ್ಯ ಎಂದು ಕೋಟತಟ್ಟು ಗ್ರಾಪಂ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ ಹೇಳಿದರು.

ಕೋಟತಟ್ಟು ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ವಿಶೇಷಚೇತನರ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ಪ್ರಮೋದ್ ಹಂದೆ, ವಾಸು ಪೂಜಾರಿ, ರಾಬರ್ಟ್ ರೊಡ್ರಿಗಸ್, ವಿದ್ಯಾ, ಸೀತಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿಕಲಚೇತನ ಫಲಾನುಭವಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಮತಿ ಅಂಚನ್ ನಿರೂಪಿಸಿದರು.

ಸಹಾಯಧನದ ಚೆಕ್ ವಿತರಣೆ

ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ತಾಲೂಕು ಸಂಯೋಜಕ ಮಧುಸೂದನ್ ಹಾಗೂ ವಿಕಲಚೇತನರ ಪುನರ್ವಸತಿ ಕೇಂದ್ರ ಮನೋತಜ್ಞ ವೈಶಾಂಕ್ ಮಾಹಿತಿ ನೀಡಿದರು. ಕೋಟತಟ್ಟು ಗ್ರಾಪಂ ವತಿಯಿಂದ ಗ್ರಾಪಂ ವ್ಯಾಪ್ತಿಯ ವಿಕಲಚೇತನರ ವೈದ್ಯಕೀಯ ನೆರವಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net