

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ರಕ್ಷಣಾಪುರ ಜವನೆರ್ ಸಂಘಟನೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪುವಿನ ಬಂಟರ ಭವನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಪು ಪಿಲಿ ಪರ್ಬದಲ್ಲಿ ಅಶೋಕ್ ರಾಜ್ ಕಾಡಬೆಟ್ಟು ತಂಡ ಪ್ರಥಮ ಸ್ಥಾನ ಗಳಿಸಿ ಒಂದು ಲಕ್ಷ ರೂ. ನಗದು ಸಹಿತ ಶಾಶ್ವತ ಫಲಕ ಪಡೆದುಕೊಂಡಿತು.
ದ್ವಿತೀಯ ಸ್ಥಾನಿಯಾದ ಕುರ್ಕಾಲು ಟೈಗರ್ಸ್ 75 ಸಾವಿರ ರೂ., ತೃತೀಯ ಸ್ಥಾನಿ ಪಡುಬಿದ್ರಿ ಬೇಂಗ್ರೆ ಫ್ರೆಂಡ್ಸ್ 30 ಸಾವಿರ ರೂ. ನಗದು, ಶಾಶ್ವತ ಫಲಕ ಪಡೆದುಕೊಂಡಿತು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಕರಿ ಹುಲಿ ಕಾಡಬೆಟ್ಟು ತಂಡದ ಸುಶಾಂತ್, ಅತ್ಯುತ್ತಮ ಹುಲಿ ಕುಣಿತ ಕುತ್ಯಾರು ಕೇಸರಿ ಟೈಗರ್ಸ್‌ನ ಅಶ್ವಿತ್, ಅಕ್ಕಿಮುಡಿ ಎಸೆದ ಎಲ್ಲ ತಂಡಗಳ ಒಬ್ಬ ಸದಸ್ಯರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಹಿತಿ ಟಿ.ಎಸ್.ಹುಸೇನ್, ರಾಷ್ಟ್ರೀಯ ಮ್ಯಾರಥಾನ್ ಪಟು ಸುಲತಾ ಕಾಮತ್ ಕಟಪಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆನಂದ್ ಕೋಟ್ಯಾನ್, ಬಾಲಕೃಷ್ಣ ಟಿ.ಭಂಡಾರಿ, ಜೋಸೆಫ್ ರೆಬೆಲ್ಲೋ, ಸಮಿತಾ ಪೂಜಾರಿ, ರಿದ್ಯಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕ ಕೆ.ಪಿ.ಶ್ರೀನಿವಾಸ್ ತಂತ್ರಿ, ಶಂಕರಪುರ ಚರ್ಚ್ ಧರ್ಮಗುರು ಪ್ರಕಾಶ್ ಅನಿಲ್ ಕ್ಯಾಸ್ತಲಿನೋ, ಜಮೀಯತುಲ್ ಫಲಾಹ ಕಾಪು ವಲಯ ಅಧ್ಯಕ್ಷ ಶಭಿ ಅಹ್ಮದ್ ಖಾಝಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಿಲಿ ಕೋಲ ನರ್ತಕ ಗುಡ್ಡ ಪಾನರ, ಧರ್ಮದರ್ಶಿ ಸತೀಶ್ ಬಂದಲೆ ಸೇರಿ ಸರ್ವಧರ್ಮೀಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿನಯ್ ಕುಮಾರ್ ಸೊರಕೆ, ಎಂಎಲ್‌ಸಿ ಮಂಜುನಾಥ್ ಭಂಡಾರಿ, ಅಶೋಕ್ ಕುಮಾರ್ ಕೊಡವೂರ್, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್, ಕಾಪು ದಿವಾಕರ್ ಶೆಟ್ಟಿ, ವಿಕ್ರಂ ಕಾಪು, ನವೀನ್‌ಚಂದ್ರ ಜೆ.ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಬೆಳಪು, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್ ಪಕ್ಕಾಲ್, ಚಂದ್ರಹಾಸ್ ಶೆಟ್ಟಿ ಪುತ್ತೂರು, ವೈ.ಸುಕುಮಾರ್, ರಮೇಶ್ ಕಾಂಚನ್, ಶಿವಾಜಿ ಸುವರ್ಣ, ಜಿತೇಂದ್ರ ಫುರ್ಟಾಡೊ, ಶರ್ಫುದ್ದಿನ್ ಶೇಖ್, ದೀಪಕ್ ಎರ್ಮಾಳ್, ಶೇಖರ್ ಹೆಜಮಾಡಿ, ರಾಜೇಶ್ ರಾವ್ ಪಾಂಗಾಳ, ನಿರಂಜನ್ ಶೆಟ್ಟಿ, ಸುನೀಲ್ ಡಿ.ಬಂಗೇರ, ದ್ವಿಶನ್ ಸೊರಕೆ, ಗುಲಾಂ ಅಹ್ಮದ್, ಹರಿಪ್ರಸಾದ್ ರೈ ಕೊಡಿಂಬಾಡಿ, ವಾಸುದೇವ ಶೆಟ್ಟಿ, ಮನೋಹರ್ ಶೆಟ್ಟಿ, ಗಣನಾಥ ಹೆಗ್ಡೆ, ಮಾಧವ ಪಾಲನ್, ಅಖಿಲೇಶ್ ಕೋಟ್ಯಾನ್, ಲಕ್ಷ್ಮೀಶ ತಂತ್ರಿ, ರಮೀಜ್ ಹುಸೇನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ, ಪ್ರಭಾಕರ್ ಕೈಪುಂಜಾಲ್, ಸತೀಶ್ ಚಂದ್ರ ಮೂಳೂರು, ಗೀತಾ ವಾಗ್ಲೇ, ಶಾಂತಲತಾ ಶೆಟ್ಟಿ, ಆಶಾ ಅಂಚನ್, ಪ್ರಭಾ ಶೆಟ್ಟಿ, ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಲನಚಿತ್ರದ ನಾಯಕ ವಿ.ಜೆ.ವಿನೀತ್, ನಾಯಕಿ ಸಮತಾ ಅಮೀನ್, ನಿರ್ದೇಶಕ ರಾಹುಲ್ ಅಮೀನ್ ಉಪಸ್ಥಿತರಿದ್ದರು. ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್.ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಮಧುರಾಜ್ ಗುರುಪುರ, ಅಮೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕೋಟ್ಯಾನ್ ವಂದಿಸಿದರು.