ಡಾ.ಕುಸುಮಾಕರ ಶೆಟ್ಟಿಗೆ ಸಾಧಕ ರತ್ನ ಪ್ರಶಸ್ತಿ

sadhana
ಗುಳ್ಳಾಡಿ- ಬೇಳೂರಿನ ಶಶಿಗೋಳಿ ಅಮ್ಮಚಿಕ್ಕು ಬ್ರಹ್ಮನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ.ಕುಸುಮಾಕರ ಶೆಟ್ಟಿ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಕೋಟ: ಗುಳ್ಳಾಡಿ- ಬೇಳೂರಿನ ಶಶಿಗೋಳಿ ಅಮ್ಮಚಿಕ್ಕು ಬ್ರಹ್ಮನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ 13ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಆರಾಧನೋತ್ಸವದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕುಸುಮಾಕರ ಶೆಟ್ಟಿ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಧಕಿ ಗಟ್ಟಿಗಿತ್ತಿ ರಾಧಾಶೀನಾ ಅವರನ್ನು ಗೌರವಿಸಲಾಯಿತು. ವಿಶ್ವ ಹಿಂದು ಪರಿಷತ್ತಿನ ಉಡುಪಿ ಜಿಲ್ಲಾ ಸಹಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಮಹೇಶ್ ಶೆಟ್ಟಿ, ಗುಳ್ಳಾಡಿ ಶಾರದಾಂಬೆ ಪ್ರಧಾನ ಅರ್ಚಕ ಶ್ರೀಧರ್ ಅಡಿಗ, ಗೌರವಾಧ್ಯಕ್ಷ ಭಾಸ್ಕರ್ ಗುಳ್ಳಾಡಿ, ಅಧ್ಯಕ್ಷ ಜಿ.ರಾಮ ಉಪಸ್ಥಿತರಿದ್ದರು. ಸಮಿತಿ ಪ್ರಮುಖರಾದ ವಾಸುದೇವ್ ಕೆ.ಆರ್. ಸ್ವಾಗತಿಸಿದರು. ಉಪನ್ಯಾಸಕ ನಾಗರಾಜ್ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net