

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ನವರಾತ್ರಿಯ ಪ್ರತಿಯೊಂದು ದಿನವು ವಿಶಿಷ್ಟ ದಿನವಾಗಿದೆ. ವಿವಿಧ ರೂಪಗಳ ಮೂಲಕ ದುಷ್ಟ ಶಕ್ತಿಗಳನ್ನು ನಾಶ ಮಾಡುವವಳು ದೇವಿ. ಸನಾತನ ಹಿಂದು ಧರ್ಮವನ್ನು ಆಚರಣೆ ಮಾಡುವುದರಿಂದ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶ್ರೀ ದತ್ತಾಶ್ರಮ ಗೌರಿಗದ್ದೆ ಅವದೂತ ವಿನಯ್ ಗುರೂಜಿ ಹೇಳಿದರು.
ಕೊಕ್ಕರ್ಣೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಸಮಿತಿ ವತಿಯಿಂದ 32ನೇ ವರ್ಷದ ಶರನ್ನವರಾತ್ರಿ ಮಹೋತ್ಸವ, ತೃತೀಯ ವರ್ಷದ ಶಾರದೋತ್ಸವ, ಕೊಕ್ಕರ್ಣೆ ದಸರಾ- 2024ರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಬೆಂಗಳೂರು ಅಭಯ ಸೇವಾ ಫೌಂಡೇಶನ್ ಅಧ್ಯಕ್ಷ ಎಂ.ಬಿ.ಉಮೇಶ್ ಶೆಟ್ಟಿ, ಉದ್ಯಮಿಗಳಾದ ಪ್ರದೀಪ ಶೆಟ್ಟಿ ಕಡಂಗೋಡು, ದಿನೇಶ ನಾಯಕ್ ಕುಂದನಹಳ್ಳಿ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಹರೀಶ್ ಶ್ಯಾನುಭಾಗ್ ಕೊಕ್ಕರ್ಣೆ ಪ್ರಸ್ತಾವನೆಗೈದರು.
ನವರಾತ್ರಿಯ ಆಚರಣೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೀಸಲಾಗದೆ ಬಡ ಹೆಣ್ಣುಮಕ್ಕಳ ವಿವಾಹ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ಮುಂತಾದ ಸಾಮಾಜಿಕ ಕಾರ್ಯಕ್ರಮ ನಡೆಸಬೇಕು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಸಸಿಗಳನ್ನು ನೀಡಬೇಕು.-ಶ್ರೀ ದತ್ತಾಶ್ರಮ ಗೌರಿಗದ್ದೆ ಅವದೂತ ವಿನಯ್ ಗುರೂಜಿ