ಶ್ರದ್ಧೆಯೆಂಬ ನೀರೆರೆದು, ಭಾಷೆಯೆಂಬ ಮರ ಬೆಳೆಸಿ, ಆನಂದವೆಂಬ ಫಲ ಪಡೆಯಿರಿ: ಗುರುದೇವ್ ಶ್ರೀ ಶ್ರೀ ರವಿಶಂಕರ್

Sri Sri Ravishankar
Published on

ನವೆಂಬರ್ ಎಂದರೆ ಉತ್ಸವ, ಅದುವೇ ಕನ್ನಡ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವವು ಏಕತೆಯನ್ನು ಆಚರಿಸುವ ದಿನವಾಗಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ, ನಾವೆಲ್ಲರೂ ಒಂದೇ ಸಮುದಾಯದ ಭಾಗವಾಗಿದ್ದೇವೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ. ಈ ಆಚರಣೆಯು ಒಟ್ಟಾಗಿ ಸೇರಲು, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸಲು ಒಂದು ಅವಕಾಶವಾಗಿದೆ.

Art of living foundation

ಈ ಉದ್ದೇಶದೊಂದಿಗೆ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಪರಮ ಪೂಜ್ಯ ಗುರುದೇವ ಶ್ರೀ ಶ್ರೀ ರವಿಶಂಕರ್, ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಬರಹಗಾರರಾದ ಡಾ. ಜಿ. ಬಿ. ಹರೀಶ್ ಅವರ ಉಪಸ್ಥಿತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಆತಿಥ್ಯ ವಹಿಸಿತು. ನಮ್ಮ ಕರ್ನಾಟಕದ ಶ್ರೀಮಂತವಾದ ಸಂಸ್ಕೃತಿ, ಭಾಷೆ, ಸಂಗೀತ ಹಾಗೂ ಭಕ್ಷ್ಯಗಳು ಸೇರಿದಂತೆ ಸಾವಿರಾರು ಜನರನ್ನು ಈ ಕಾರ್ಯಕ್ರಮದಲ್ಲಿ ಒಗ್ಗೂಡಿಸಿತು.

ಮುಳಬಾಗಿಲು ದೋಸೆ, ಅಕ್ಕಿ ತರಿ ಕಡುಬು, ಗಿರ್ಮಿಟ್ ಹಾಗೂ ಮೆಣಸಿನ ಬಜ್ಜಿ, ಒತ್ತು ಶ್ಯಾವಿಗೆ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ, ಜೋಳದ ರೊಟ್ಟಿ ಇವೇ ಮೊದಲಾದ ಸಂಪೂರ್ಣ ಸಾಂಪ್ರದಾಯಿಕ ಕರ್ನಾಟಕ ಖಾದ್ಯಗಳನ್ನು ಒಳಗೊಂಡ ಈ ಆಹಾರ ಮೇಳದಲ್ಲಿ ಸಿಹಿತಿಂಡಿ ಪ್ರಿಯರಿಗಾಗಿ, ವಿಶೇಷವಾದ ಎ2 ಹಾಲಿನ ಸಿಹಿತಿಂಡಿಗಳು ಹಾಗೂ ಆರ್ಗ್ಯಾನಿಕ್ ಐಸ್ ಕ್ರೀಂಗಳನ್ನು ಬಡಿಸುವ ಒಂದು ಕೌಂಟರ್ ಕೂಡಾ ಇತ್ತು.

Art of living foundation

ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮಯ ಕವಿಗಳು ರಚಿಸಿರುವ ಗೀತೆ, ಕವನಗಳು ನಮ್ಮ ಮೈಮನಗಳಲ್ಲಿ ರೋಮಾಂಚನ ಉಂಟುಮಾಡುತ್ತವೆ. ಈ ನಿಟ್ಟಿನಲ್ಲಿ “ಸಹಸ್ರ ಕಂಠ ಗಾಯನ” ಕಾರ್ಯಕ್ರಮದ ಮೂಲಕ 500ಕ್ಕೂ ಹೆಚ್ಚು ಗಾಯಕರು ನಾಡಗೀತೆ, ಜಾನಪದ ಗೀತೆ ಹಾಗೂ ಭಾವಗೀತೆಗಳನ್ನು ಪಸ್ತುತ ಪಡಿಸಿದರು. ವಿವಿಧ ಸಾಂಸ್ಕೃತಿಕ ತಂಡಗಳಿಂದ ಡೊಳ್ಳು ಕುಣಿತ, ನಂದಿ ಧ್ವಜ, ಪೂಜಾ ಕುಣಿತ ಮುಂತಾದ ಜಾನಪದ ಪ್ರಾಕಾರಗಳ ಪ್ರದರ್ಶನ ನಡೆಯಿತು.

ಪೂಜ್ಯ ಗುರುದೇವ ಶ್ರೀ ಶ್ರೀ ರವಿಶಂಕರರ ಸಾನ್ನಿಧ್ಯದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮವು ನೆರವೇರಿತು. ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಂಡರೆ, ಆ ಭಾಷೆಯಲ್ಲಿರುವ ಎಲ್ಲಾ ಸಿರಿಸಂಪದವನ್ನು ಮುಂದಿನ ಹಲವಾರು ತಲೆಮಾರುಗಳವರೆಗೆ ಉಳಿಸಬಹುದು, ಬೆಳೆಸಬಹುದು ಎಂದು ಗುರುದೇವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

Art of living foundation
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net