More

    ಚೀನಾದಲ್ಲಿ ನ್ಯೂಮೋನಿಯಾ, ಇನ್​ಫ್ಲುಯೆಂಜಾ ಉಲ್ಬಣ; ಮುನ್ನೆಚ್ಚರಿಕೆ ವಹಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

    ಚೀನಾದಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚುತ್ತಿವೆ. ಈ ಪಿಡುಗು ಭಾರತಕ್ಕೂ ವ್ಯಾಪಿಸುವ ಆತಂಕ ಅಷ್ಟೇನೂ ಸದ್ಯಕ್ಕಿಲ್ಲ. ಆದರೂ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

    ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ರಾಜ್ಯ ಸರ್ಕಾರಗಳಿಗೆ ಅದು ಭಾನುವಾರ ಸೂಚನೆ ನೀಡಿದೆ. ನೆರೆಯ ಚೀನಾದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿಯೂ ಹೇಳಿದೆ. ಸದ್ಯಕ್ಕೆ ಯಾವುದೇ ಭೀತಿ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ, ಆಸ್ಪತ್ರೆಯ ಹಾಸಿಗೆಗಳು, ಔಷಧಗಳು, ಇನ್​ಫ್ಲುಯೆಂಜಾ ಲಸಿಕೆಗಳು, ಆಮ್ಲಜನಕ, ವೆಂಟಿಲೇಟರ್‌, ಆ್ಯಂಟಿಬಯಾಟಿಕ್ಸ್, ವೈಯಕ್ತಿಕ ರಕ್ಷಣಾ ಸಾಧನಗಳು, ಪರೀಕ್ಷಾ ಕಿಟ್‌ಗಳಂತಹ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ನಿರ್ದೇಶಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

    ಇನ್​ಫ್ಲುಯೆಂಜಾ ತರಹದ ಅನಾರೋಗ್ಯದ ಪ್ರಕರಣಗಳಾಗಿ ಕಂಡುಬರುವ ಉಸಿರಾಟದ ರೋಗಕಾರಕಗಳ ಸಮಗ್ರ ಕಣ್ಗಾವಲು (ILI) ಮತ್ತು ತೀವ್ರವಾದ ಉಸಿರಾಟದ ಕಾಯಿಲೆ (SARI) ಕುರಿತು ಗಮನಹರಿಸುವಂತೆ ಸಲಹೆ ನೀಡಲಾಗಿದೆ,

    ಉಸಿರಾಟ ಕಾಯಿಲೆಗಳಿಂದ ಪೀಡಿತ ರೋಗಿಗಳ ಮೂಗು ಮತ್ತು ಗಂಟಲಿನ ಸ್ವ್ಯಾಬ್ ಮಾದರಿಗಳನ್ನು, ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗೆ ಸಂಬಂಧಿಸಿದಂತೆ ಉಸಿರಾಟದ ರೋಗಕಾರಕಗಳ ಪರೀಕ್ಷೆಗಾಗಿ ರಾಜ್ಯಗಳಲ್ಲಿರುವ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ಕಳುಹಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ.

    ಚೀನಾದಲ್ಲಿ ನಿಗೂಢ ನ್ಯುಮೋನಿಯಾದಲ್ಲಿನ ಏಕಾಏಕಿ ಪ್ರಕರಣಗಳ ಹೆಚ್ಚಳವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲದೆ, ಪ್ರಸ್ತುತ ಪರಿಸ್ಥಿತಿಯಿಂದ ಹೊರಹೊಮ್ಮಬಹುದಾದ ಯಾವುದೇ ರೀತಿಯ ತುರ್ತುಸ್ಥಿತಿಗೆ ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಹೇಳಿದೆ.

    ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳ ಮತ್ತು ನ್ಯುಮೋನಿಯಾ ಕುರಿತು ಚೀನಾದಿಂದ ವಿವರವಾದ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಕೋರಿದೆ.

    ಹೃತಿಕ್ ರೋಷನ್, ಟೈಗರ್ ಶ್ರಾಫ್ ಡ್ಯಾನ್ಸ್​ ನೋಡಿದ ನಂತರ ನರ್ತಿಸುವುದನ್ನೇ ನಿಲ್ಲಿಸಿದೆ…ಜೋರಾಮ್​ ಬಗ್ಗೆ ಮನಬಿಚ್ಚಿ ಮಾತನಾಡಿದ ಮನೋಜ್ ಬಾಜಪೇಯಿ

    ಬೌನ್ಸರ್​ ಎದುರಿಸುತ್ತೇನೆ, ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತೇನೆ: ತೆಲಂಗಾಣ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿ ಮೊಹಮ್ಮದ್ ಅಜರುದ್ದೀನ್​

    ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಧಾವಿಸಿದ ಸೇನೆ/ ಕ್ರಿಸ್‌ಮಸ್ ವೇಳೆಗೆ ಶುಭಸುದ್ದಿ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts