

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಪುತ್ರನ ಕಾರಿನ ಮೇಲೆ ದಾಳಿ ನಡೆದಿದೆ.
ಭಾನುವಾರ ರಾತ್ರಿ ಕಾರಿನಲ್ಲಿ ಶಾಸಕರ ಪುತ್ರ, ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ ಬರುತ್ತಿದ್ದರು. ಆ ವೇಳೆ ಕಾರನ್ನು ಅಡ್ಡಗಟ್ಟಿದ ಸಂಬಂಧಿಕರು ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
ಸಂಗೆದೇವರಕೊಪ್ಪ ಗ್ರಾಮದ ಶಂಕ್ರಪ್ಪ ಹನುಮಂತಪ್ಪ ನಿಂಬಣ್ಣವರ, ಮಹಾಂತೇಶ ಹನುಮಂತಪ್ಪ ನಿಂಬಣ್ಣವರ ಹಾಗೂ ಸಂಗಮೇಶ ಹನುಮಂತಪ್ಪ ನಿಂಬಣ್ಣವರ ಅವರ ವಿರುದ್ಧ ನಾಗರಾಜ ಹನುಮಂತಪ್ಪ ನಿಂಬಣ್ಣವರ ಅವರು ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.