ಬೆಂಗಳೂರಿನ ಸುನಿತಾ ಮತ್ತು ಬಸವರಾಜ ದಂಪತಿಯೂ ಬಸವಕಲ್ಯಾಣ ತಾಲೂಕಿನಲ್ಲಿ ಮದುವೆ ಮುಗಿಸಿ, ಕಲಬುರಗಿ ನಗರಕ್ಕೆ ಆಗಮಿಸಿ, ದೇವಲಗಾಣಗಾಪುರ, ತ್ತರಗಿಗೆ ದೇವರ ದರ್ಶನಕ್ಕೆ ಹೋಗಿ ವಾಪಸ್ ಆಗುವ ವೇಳೆ ಅಪಘಾತ ಸಂಭವಿಸಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಟನೆ ಸ್ಥಳಕ್ಕೆ ಡಿಸಿಪಿ ಶಾಲೂ, ಸಂಚಾರಿ ಎಸಿಪಿ ಪ್ರಭು ಡಿ.ಟಿ, ಪಿಐ ಶಕೀಲ ಅಂಗಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಂಚಾರ ಠಾಣೆ 1ರಲ್ಲಿ ಪ್ರಕರಣ ದಾಖಲಾಗಿದೆ.