ಛೋಟಾ ಪಾಕಿಸ್ತಾನ ಮಾಡಲು ಬಿಡಲ್ಲ: ದತ್ತಾತ್ರೇಯ ಪಾಟೀಲ್​ ರೇವೂರ ಕಿಡಿ

dattatreya patil revoor
dattatreya patil revoor
Published on

ಪ್ರಮುಖ ಮುಖ್ಯಾಂಶಗಳು

  • ಯಾರನ್ನು ನಿಂದಿಸಿಲ್ಲ. ದಬ್ಬಾಳಿಕೆಗೆ ಬೆದರಲ್ಲ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ರಜಾಕಾರರ ವಿರುದ್ಧ ನಮ್ಮ ಹಿರಿಯರು ಹೋರಾಡಿದ್ದು, ಜಿಲ್ಲೆಯಲ್ಲಿ ಗುಂಡಾಗಿರಿ ಹೆಚ್ಚುತ್ತಿದ್ದು, ಕೆಲವು ಸಮುದಾಯದವರ ನಮಗ್ಯಾರು ಏನು ಮಾಡುತ್ತಾರೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಎಷ್ಟೇ ಬೆದರಿಕೆ ಬಂದರೂ ಕಲಬುರಗಿಯನ್ನು ಛೋಟಾ ಪಾಕಿಸ್ತಾನ ಮಾಡಲು ಬಿಡುವುದಿಲ್ಲ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ಕಿಡಿಕಾರಿದರು.
ಆಳಂದದ ಲಾಡ್ಲಾ ಮಶಾಕ್​ ದರ್ಗಾದಲ್ಲಿದ್ದ ರಾಘವ ಚೈತನ್ಯ ಶಿವಲಿಂಗದ ಪೂಜೆ ವೇಳೆ ಹಲ್ಲೆ ನಡೆಸಿದ ಗಲಭೆಕೋರರ ಕೇಸ್​ ವಾಪಸ್​ ಖಂಡಿಸಿ, ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡುವಾಗ ನಾನು ಯಾವುದೇ ಧರ್ಮ, ಜಾತಿಯನ್ನು ನಿಂದಿಸಿಲ್ಲ. ಆದರೂ ಸುಳ್ಳು ಕೇಸ್​ ದಾಖಲಿಸಿದ್ದು, ಇಂತಹ ನೂರು ಎ್​ಐಆರ್​ಗಳಿಗೆ ಹೆದರುವುದಿಲ್ಲ. ವಾಪಸ್​ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲ್​ ಹಾಕಿದರು.
ಕಲಬುರಗಿಯಲ್ಲಿ ಕೆಲವರು ರಾಜ್ಯ ಸರ್ಕಾರ ನಮ್ಮದಿದೆ ಎನ್ನುವ ಭ್ರಮೆಯಲ್ಲಿದ್ದಾರೆ, ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ಎಂಬುದನ್ನು ಮರೆಯಬಾರದು. ಅರಾಜಕತೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಪತ್ರ ಬರೆಯಲಾಗುವುದು ಎಂದರು.
ಸಂವಿಧಾನ ರಕ್ಷಕರೆನ್ನುವ ಗೃಹ ಸಚಿವ ಪ್ರಿಯಾಂಕ್​ ರ್ಖಗೆ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ನೂರಾರು ಜನರು ಸೇರಿ ನಿಂದಿಸಿದ್ದಾರೆ. ಠಾಣೆ ಎದುರೆ ಅಶಿಸ್ತು ವರ್ತಿಸಿದ್ದಾರೆ. ಜಿಲ್ಲೆಯಲ್ಲಿ ಹಲ್ಲೆ, ಗುಂಡಾವರ್ತನೆ ಮಿತಿ ಮೀರಿದೆ. ಗೂಂಡಾಗಿರಿ ವಿರುದ್ಧ ಒಂದು ಲಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು. ವಿಧಾನ ಪರಿಷತ್​ ಮಾಜಿ ಸದಸ್ಯ ಅಮರನಾಥ ಪಾಟೀಲ್​, ಅವ್ವಣ್ಣ ಮ್ಯಾಕೇರಿ, ನಿತಿನ್​ ಗುತ್ತೇದಾರ, ಶಿವರಾಜ ಪಾಟೀಲ್​ ರದ್ದೇವಾಡಗಿ, ಲಿಂಗರಾಜ ಬಿರಾದಾರ, ರಾಜು ವಾಡೇಕರ್​, ಸಿದ್ದಾಜಿ ಪಾಟೀಲ್​, ದಯಾನ ಧಾರವಾಡಕರ್​, ವಿಶಾಲ ದರ್ಗಿ, ರಾಮಚಂದ್ರ ಜಾಧವ ಇತರರಿದ್ದರು.
ಕಲಬುರಗಿಯಲ್ಲಿ 40 ವರ್ಷದಿಂದ ನಮ್ಮ ಕುಟುಂಬ ಸಕ್ರಿಯ ರಾಜಕಾರಣದಲ್ಲಿದೆ. ಅಧಿಕಾರದಲ್ಲಿದ್ದಾಗ ಯಾವುದೇ ಕೋಮು ಸಂರ್ಷ ನಡೆದಿರಲಿಲ್ಲ. ಈಗ ಪಾಕಿಸ್ತಾನದ ಮೇಲೆ ಪ್ರೀತಿ ಇರುವ ಕೆಲವರು ಗೂಂಡಾಗಿರಿ ಮಾಡುತ್ತಿದ್ದಾರೆ. ವಿರೋಧಿ ದೇಶ ಪಾಕಿಸ್ತಾನ ಮಾಡಲು ಹೊರಟವರಿಗೆ ಜಿಲ್ಲೆ ಜನ ಪಾಠ ಕಲಿಸಿದ್ದಾರೆ. ಜಿಲ್ಲೆಯ ಜನರೆಂದರೆ ದೇಶದ ಮೇಲೆ ಅಭಿಮಾನ ಇರುವವರೆಲ್ಲರು ಎಂದರ್ಥ.
>- ದತ್ತಾತ್ರೇಯ ಪಾಟೀಲ್​ ರೇವೂರ್​, ಮಾಜಿ ಶಾಸಕ
ಅಪ್ಪು ಗೌಡರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಸರ್ಕಾರ ಕೂಡಲೇ ವಾಪಸ್​ ಪಡೆಯಬೇಕು. ದೂರು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ 20,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಗೂಡಿಸಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
> ಬಸವರಾಜ ಮತ್ತಿಮಡು, ಶಾಸಕ
ಆಳಂದ ಗಲಭೆಯ ನೈಜ ಆರೋಪಿಗಳ ಕೇಸ್​ ವಾಪಸ್​ ಪಡೆದಿರುವುದು ಖಂಡನೀಯ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಪ್ರತಿಭಟನೆಯಲ್ಲಿ ಮಾಜಿ ಶಾಸಕರು ಹಳೆಯ ಘಟನೆಯನ್ನು ಮೆಲುಕು ಹಾಕಿದ್ದಾರೆಯೇ ಹೊರತು ಯಾರನ್ನೂ ನಿಂದಿಸಿಲ್ಲ. ಅವರ ವಿರುದ್ಧ ಸುಳ್ಳು ಕೇಸ್​ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್​ ಠಾಣೆಗೆ ನುಗ್ಗಿದ 18 ಮಂದಿ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು.
> ಅಶೋಕ ಬಗಲಿ, ಬಿಜೆಪಿ ಜಿಲ್ಲಾಧ್ಯಕ್ಷ
ಅಲ್ಲಮಪ್ರಭು ಮನೆ ರಸ್ತೆ ಮಾಡಿಸಲಿ
ಶಾಸಕ ಅಲ್ಲಮಪ್ರಭು ಪಾಟೀಲ್​ ಅವರಿಂದ ನನಗೆ ಯಾವುದೇ ಸರ್ಟಿಫಿಕೇಟ್​ ಬೇಕಾಗಿಲ್ಲ, ಕಲಬುರಗಿ ಜನರಿಗೆ ನಮ್ಮ ಕುಟುಂಬ ಇತಿಹಾಸ ತಿಳಿದಿದೆ. ಶಾಸಕರಾಗಿ ಮೂರು ವರ್ಷವಾಗಿದ್ದು, ಮೂರು ಕೆಲಸ ತಿಳಿಸಲಿ. ಒಂದು ಸಮುದಾಯದ ಓಲೈಕೆಯಲ್ಲಿ ನಿರತರಾಗಿದ್ದಾರೆ. ಶಾಸಕರ ಮನೆ ಎದುರು ಸಾಗುವ ಬಸ್​ ನಿಲ್ದಾಣದ ರಸ್ತೆಯನ್ನೇ ಮಾಡಲು ಆಗಿಲ್ಲ. ಅಲ್ಲಮಪ್ರಭು ಪಾಟೀಲ್​ ತಮ್ಮದೇ ಪಕ್ಷದವರೊಬ್ಬರಿಗೆ ಟಿಕೆಟ್​ ಬಿಟ್ಟು ಕೊಡುವುದಾಗಿ ತಿಳಿಸಿದ್ದು, ಅದನ್ನು ಬಗೆಹರಿಸಿಕೊಳ್ಳಲಿ. ಪಾಲಿಕೆಯಲ್ಲಿ ನಿರಂತರ ಸಮಸ್ಯೆಗಳಿದ್ದು, ಅವುಗಳತ್ತ ಗಮನ ಹರಿಸಲಿ. ನಾನು ಮುಸ್ಲಿಂ ಲೀಗ್​ ಬಗ್ಗೆ ಮಾತನಾಡಿದ್ರೆ ಕಾಂಗ್ರೆಸ್​ನವರಿಗೆ ಸಮಸ್ಯೆ ಏಕೆ ಆಗುತ್ತಿದೆ ಎಂದು ದತ್ತಾತ್ರೇಯ ಪಾಟೀಲ್​ ಕಿಡಿಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net