ನಿವೃತ್ತ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ಸಮಾಜದಲ್ಲಿ ಹೊಸತು ಬಂದಾಗ ಕಕ್ಕಾಬಿಕ್ಕಿಯಾಗುವುದು ಸಾಮಾನ್ಯ. ರೇಡಿಯೊ, ಟಿವಿ, ಮೊಬೈಲ್ ಬಂದಾಗಲೂ ಹೀಗೆ ಆಗಿತ್ತು. ಓದು, ವಿಷಯ ಸಂಗ್ರಹ, ಮಾಧ್ಯ, ಓದುವ ವಿವಿಧ ಮಾರ್ಗ ಹೀಗೆ ಯಾವುದನ್ನೂ ಬೇಡ ಎನ್ನುವ ಸ್ಥಿತಿಯಲ್ಲಿಲ್ಲ. ಸಮಸ್ಯೆಗೆ ಪರಿಹಾರವೂ ಇದೆ. ಹೊಸ, ಹೊಸ ಆಲೋಚನೆಗಳು ಹೊರಬರಬೇಕು. ಸಾಹಿತ್ಯ, ಸಂಸತಿ ಕುರಿತು ವಿದ್ಯುನ್ಮಾನ, ಮುದ್ರಣ ಮಾಧ್ಯಮದಲ್ಲಿ ಸ್ಥಳಾವಕಾಶ ನೀಡಬೇಕು. ಓದು ನಿರಂತರ, ಆಶಾವಾದಿಗಳಾಗಿರಬೇಕು. ಓದಿನಿಂದ ಸಮಗ್ರ ಜ್ಞಾನ ಸಿಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ವಿವರಿಸಿದರು.