ಡಾ.ಅಂಬೇಡ್ಕರ್​ ಕನಸಿನ ಭಾರತ ನಿರ್ಮಾಣಕ್ಕೆ ಚಿಂತನೆ ಅಗತ್ಯ

ಗುಲ್ಬರ್ಗ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಬೃಂದಾ ಅಡಿಗೆ, ಡಾ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​, ಪ್ರೊ.ಚಂದ್ರಕಾಂತ ಯಾತನೂರ್​, ಡಾ.ಪ್ರತಿಮಾ ಮಠದ್​, ಜಯಾಂಬಿಕ ಇತರರಿದ್ದರು.
ಗುಲ್ಬರ್ಗ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್​ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಬೃಂದಾ ಅಡಿಗೆ, ಡಾ.ರಮೇಶ ಲಂಡನಕರ್​, ಡಾ.ಎನ್​.ಜಿ.ಕಣ್ಣೂರ್​, ಪ್ರೊ.ಚಂದ್ರಕಾಂತ ಯಾತನೂರ್​, ಡಾ.ಪ್ರತಿಮಾ ಮಠದ್​, ಜಯಾಂಬಿಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅಭಿಮತ
  • ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಡಾ.ಅಂಬೇಡ್ಕರ್​ ಜಯಂತಿ
ಕಲಬುರಗಿ: ಇಡೀ ಜಗತ್ತು ಡಾ. ಬಿ.ಆರ್​.ಅಂಬೇಡ್ಕರ್​ ಜನ್ಮ ದಿನ ಆಚರಿಸುತ್ತಿದೆ. ಅವರ ನೈಜ ಕನಸಿನ ಭಾರತ ನಿರ್ಮಿಸಲು ಅವರ ಜೀವನ ಮತ್ತು ಚಿಂತನೆ ಅರ್ಥೈಸಿಕೊಳ್ಳಬೇಕು. ಅವರನ್ನು ಮರೆತರೆ ನಿಜವಾದ ಭಾರತೀಯರಾಗಲು ಸಾಧ್ಯವಿಲ್ಲ. ಯಾವ ೇತ್ರದಲ್ಲೂ ಸಾಧಕನಾಗಲು ಸಾಧ್ಯವಿಲ್ಲ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್​. ಉಡಿಕೇರಿ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್​ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್​ ಡಾ. ಬಿ.ಆರ್​.ಅಂಬೇಡ್ಕರ್​ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್​ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ಮೀಸಲಾತಿ ಮೂಲಕ ಉದ್ಯೋಗ, ಶಿಕ್ಷಣ, ಅವಕಾಶ ಪಡೆಯಲಾಗಿದೆ. ಹೊಂದಾಣಿಕೆಗಿಂತ ಬದಲಾವಣೆಗೆ ಪ್ರಶ್ನಿಸುವಂತಾಗಬೇಕು. ಆತ್ಮಸಾಯಿಂದ ಡಾ. ಅಂಬೇಡ್ಕರ ಅರಿವು ಮತ್ತು ಅವರ ಚಿಂತನೆಗಳನ್ನು ಬೋಧಿಸಿ ಸಮಾಜ ಜಾಗೃತಗೊಳಿಸಬೇಕು ಎಂದರು.
ಪ್ರಜಾಪ್ರಭುತ್ವ ಯಶಸ್ಸಿಗೆ ಭಾರತೀಯ ಸಂವಿಧಾನದ ಆಶಯ ಕಾರಣ. ವಿಶ್ವದ ಎಲ್ಲಾ ರಾಷ್ಟ್ರಗಳು ಡಾ. ಅಂಬೇಡ್ಕರ್​ ಅವರ ಸಂವಿಧಾನ, ಅವರ ಕೊಡುಗೆ ಗೌರವಿಸುತ್ತಿವೆ. ಅವರ ಅಪಾರ ಜ್ಞಾನ ಶಕ್ತಿ ಪ್ರಶಂಸಿಸುತ್ತಿವೆ. ಡಾ.ಅಂಬೇಡ್ಕರ್​ ನೋವು ಅನುಭವಿಸಿದರೆ ನಾವೆಲ್ಲರೂ ಸಿಹಿ ಅನುಭವಿಸುತ್ತಿದ್ದೇವೆ. ಅವರನ್ನು ಮರೆತರೆ ಜೀವನ ಮುಕ್ತಿ ಸಾಧ್ಯವಿಲ್ಲ. ಸಂವಿಧಾನದ ಅಡಿ ಸಮಾನತೆ ಮತ್ತು ಅವಕಾಶ ನೀಡಿದ ಮಹಾಜ್ಞಾನಿ ಡಾ.ಬಿ.ಆರ್​.ಅಂಬೇಡ್ಕರ್​ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ$್ಯ ಚಳುವಳಿ ಸೇರಿ ಗಾಂಧಿ ಜಯಂತಿ, ಡಾ.ಅಂಬೇಡ್ಕರ್​ ಜಯಂತಿ, ಗಣರಾಜ್ಯೋತ್ಸವ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದರು.
ಖ್ಯಾತ ಸಮಾಜ ಚಿಂತಕಿ, ಬೆಂಗಳೂರು ಮುಕ್ತಿ ಒಕ್ಕೂಟದ ಸಂಚಾಲಕಿ ಬೃಂದಾ ಅಡಿಗೆ ಮಾತನಾಡಿ, ಡಾ.ಬಿ.ಆರ್​.ಅಂಬೇಡ್ಕರ್​: ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯದ ಪ್ರತಿಕ & ಡಾ.ಬಿ.ಆರ್​.ಅಂಬೇಡ್ಕರ್​ ಮೂಲಕ ಭಾರತದ ಪುನರ್​ ಚಿಂತನೆ ಕುರಿತು ಮಾತನಾಡಿ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಮೂಲಭೂತ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಲಾಗಿದೆ. ಶಿಕ್ಷಣವೆಂದರೆ ಪದವಿಯಲ್ಲ. ಜ್ಞಾನ, ವಿವೇಚನೆ ಅನ್ಯಾಯ ಪ್ರಶ್ನಿಸಿ ಅವಕಾಶ ಮತ್ತು ಸೌಲಭ್ಯ ಪಡೆಯುವ ಚಿಂತನಾ ಕ್ರಮ. ನನ್ನ ಹಕ್ಕು ನನಗಿದೆ, ನನ್ನ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಯಾರ ಬೆಂಬಲದ ಅವಶ್ಯಕತೆಯೂ ಇಲ್ಲ ಎಂಬ ಪ್ರಜ್ಞಾವಂತಿಕೆ, ನಾಗರೀಕ ಪ್ರೆ ಬೆಳೆಸಿಕೊಳ್ಳಬೇಕು. ಅದರಲ್ಲೂ ಯುವ ಜನತೆ ಡಾ.ಅಂಬೇಡ್ಕರ್​ ವಿಷನ್​ ಅರ್ಥ ಮಾಡಿಕೊಳ್ಳಬೇಕು ಎಂದರು.
ಸ್ವತಂತ್ರ$್ಯ ಬಂದು 79 ವರ್ಷ ಕಳೆದಿದೆ. ಸಂವಿಧಾನ ಜಾರಿಯಾಗಿ 76 ವಂಸಂತಗಳು ಪೂರೈಸಿವೆ. ನೊಂದ ದುರ್ಬಲರಿಗೆ, ಶೋಷಿತರಿಗೆ, ಅಲ್ಪಸಂಖ್ಯಾತರಿಗೆ ಒನ್​ ಮ್ಯಾನ್​ ಒನ್​ ವೋಟ್​ ಹಕ್ಕು ಸಿಕ್ಕಿದೆ. ನಾಗರೀಕರು ಮತದ ಮೌಲ್ಯ ಅರ್ಥ ಮಾಡಿಕೊಳ್ಳಬೇಕಿದೆ. ರಾಜಕೀಯ ಸ್ವಾತಂತ್ರ$್ಯ ಸಮಾನತೆಯಲ್ಲ. ಸಂವಿಧಾನ ನೀಡಿರುವ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ದುರ್ಬಲರು ಮತ್ತು ಶೋಷಿತರಿಗೆ ಸಂಪೂರ್ಣ ಲಭಿಸಿಲ್ಲ. ಸಮಾನತೆ ಎಂದರೆ ಕೇವಲ ಅಂತಸ್ತು, ಬಂಗಲೆ, ಕಾರು, ಉಡುಗೆ ತೊಡುಗೆಯಿಂದ ಅಳೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸ್ವಾತಂತ್ರ$್ಯ ಮತ್ತು ಸಮಾನ ಗೌರವ ಪ್ರತಿ ಪ್ರಜೆಗೂ ನೀಡುವಂತಾದರೆ ಪ್ರಜಾಪ್ರಭುತ್ವದ ನತೆ ಹೆಚ್ಚುತ್ತದೆ. ಜಾತಿ, ವರ್ಗ, ಧರ್ಮ, ಸಂಸತಿ, ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ವ್ಯಾಟ್ಯಾಪ್​ಗಳಲ್ಲಿ ಸುಳ್ಳು ವದಂತಿಗಳು ಹರಡುತ್ತಿವೆ. ನೈಜ ಸಂಗತಿಗಳನ್ನು ಅರ್ಥ ಮಾಡಿಕೊಂಡು ಪ್ರಶ್ನಿಸುವ ಧೈರ್ಯ ಮಾಡಬೇಕು ಎಂದರು.
ಡಾ.ಅಂಬೇಡ್ಕರ್​ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಪ್ರೊ.ಚಂದ್ರಕಾಂತ ಯಾತನೂರ್​ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಸಂವಿಧಾನದ ಮೂಲಕ ಓಟಿನ ಹಕ್ಕಿಗೆ ಹೆಚ್ಚು ಮೌಲ್ಯವಿದೆ. ಜನರು ಮತದಾನದಲ್ಲಿ ಎಚ್ಚರಿಕೆ ವಹಿಸಬೇಕು. ದಲಿತರು ಉನ್ನತ ಹುದ್ದೆಯಲ್ಲಿದ್ದರೂ ಜಾತಿ ಆಧಾರಿತ ಹಿಂಸೆಯಿಂದ ಶೋಷಣೆ, ಹಿಂಸೆ ಮತ್ತು ಆತ್ಮಹತ್ಯೆಯಂತಹ ಟನೆಗಳು ನಡೆಯುತ್ತಿವೆ. ಡಾ.ಅಂಬೇಡ್ಕರ್​ ಅವರ ವಿಚಾರಗಳನ್ನು ಅನುಸರಿಸಿ ನೊಂದವರಿಗೆ ಸಹಾಯಹಸ್ತ ಚಾಚುವ ಮೂಲಕ ಸಮಸಮಾಜ ನಿರ್ಮಾಣ ಮಾಡೋಣ ಎಂದರು.
ವಿದ್ಯಾವಿಷಯಕ ಪರಿಷತ್​ ಸದಸ್ಯೆ ಡಾ.ಪ್ರತಿಮಾ ಮಠದ್​, ಮೌಲ್ಯಮಾಪನ ಕುಲಸಚಿವ ಡಾ.ನಿಂಗಣ್ಣ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ.ರಮೇಶ ಲಂಡನ್ಕರ್​ ಇದ್ದರು. ವಿಶ್ರಾಂತ ಕುಲಪತಿ ಪ್ರೊ.ಜಿ.ಶ್ರೀರಾಮುಲು ಪಾಲ್ಗೊಂಡಿದ್ದರು. ಸಿದ್ಧಾರ್ಥ ಚಿಮ್ಮಯಿ ಇದ್ಲಾಯಿ ಡಾ.ಅಂಬೇಡ್ಕರ್​ ಗೀತೆ ಪ್ರಸ್ತುತಪಡಿಸಿದರು. ಡಾ.ಅಮಿತಾ ರಾಣಿ ಅತಿಥಿ ಪರಿಚಯ ಮಾಡಿದರು. ಡಾ. ಕಾಶಿನಾಥ ನೂಲಕರ್​ ನಿರೂಪಿಸಿದರು. ಶಾಂತಪ್ಪ ಹೆಬಳಿ ವಂದಿಸಿದರು.

ಸಂವಿಧಾನ ಜಾರಿಯಿಂದ ಸ್ವಲ್ಪ ಮಟ್ಟಿಗೆ ಬದಲಾವಣೆ ಕಾಣುತ್ತಿದೆ. ಅದರ ವೇಗ ಹೆಚ್ಚಾಗಬೇಕಿದೆ. ಅವಕಾಶಗಳಿವೆ, ಸವಾಲುಗಳಿವೆ ಆದರೆ, ಗುಲಾಮರಾಗಿ ಬೇಡುವುದು ಅಸಂವಿಧಾನಿಕ ನಡೆ. ಪ್ರಶ್ನಿಸುವ ಜಾಣ್ಮೆ ಮತ್ತು ಚಿಂತನೆ ಮೈಗೂಡಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net