ಅಶೋಕರಿಂದ ಧಮ್ಮದ ಪುನರುತ್ಥಾನ

Dhammayatre
Dhammayatre
Published on

ಪ್ರಮುಖ ಮುಖ್ಯಾಂಶಗಳು

  • ಭಂತೆ ಸಂಸಕ್​ ಕೋವಿದೋ ಹೇಳಿಕೆ
  • ಬುದ್ಧ ವಿಹಾರದಲ್ಲಿ ಧಮ್ಮಯಾತ್ರೆಗೆ ಚಾಲನೆ
ಕಲಬುರಗಿ: ಬುದ್ಧರಿಗೆ ಜ್ಞಾನ ಪ್ರಾಪ್ತಿಯಾದ ನಂತರ ಸುಮಾರು 45 ವರ್ಷ ಭಾರತದಾದ್ಯಂತ ಕಾಲ್ನಡಿಗೆ ಮೂಲಕ ಧಮ್ಮ ಪ್ರಸಾರ ಮಾಡಿದರು. ಸಾಮ್ರಾಟ ಅಶೋಕರು ವಿಶ್ವದ ಇತರೆ ದೇಶಗಳಿಗೆ ಧಮ್ಮದೂತರನ್ನು ರಾಯಭಾರಿಯಾಗಿ ಕಳುಹಿಸಿ ಧಮ್ಮದ ಪುನರುತ್ಥಾನ ಮಾಡಿದರು ಎಂದು ಭಂತೆ ಸಂಸಕ್​ ಕೋವಿದೋ ಹೇಳಿದರು.
ಬುದ್ಧ ವಿಹಾರದಲ್ಲಿ ಸೋಮವಾರ ಏರ್ಪಡಿಸಿದ್ದ ಧಮ್ಮಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಗನ್​ ಮಲಿಕ್​ ಅವರು ಮಾತನಾಡಿ, ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹಾಗೂ ವಿಶ್ವದಲ್ಲಿ ಮೈತ್ರಿ, ಕರುಣೆ ಹಾಗೂ ಶಾಂತಿಯ ಸಂದೇಶವನ್ನು ನೀಡುವ ಮೂಲಕ ವಿಶ್ವವನ್ನು ಸೌಹಾರ್ದತೆಯಿಂದ ನಿರ್ಮಿಸೋಣ ಎಂದು ಹೇಳಿದರು.
ತೆಲಂಗಾಣದ ಕಾರ್ಮಿಕ, ಗಣಿಗಾಗಿಕೆ ಸಚಿವ ವಿವೇಕ ವೆಂಕಟಸ್ವಾಮಿ ಮಾತನಾಡಿ, ಮಲ್ಲಿಕಾರ್ಜುನ ರ್ಖಗೆ ದಣ ಭಾರತದಲ್ಲಿ ಸುಂದರವಾದ ಬುದ್ಧ ವಿಹಾರ ನಿರ್ಮಿಸಿ, ಸರ್ವರಿಗೂ ಶಾಂತಿ ಮತ್ತು ಸಹೋದರತೆಯ ಜೀವನ ಹೊಂದುವ ಕೇಂದ್ರವಾಗಿಸಿದ್ದಾರೆ ಎಂದರು.
ಭಂತೆ ಸಂಬೋನ್​ ಮಾತನಾಡಿ, ಸಂತೋಷ ಹಾಗೂ ಉತ್ತಮ ಜೀವನ ಹೊಂದಲು ಈ ಬುದ್ಧ ಭೂಮಿ ನೆರವಾಗಲಿದೆ ಎಂದರು.
ಆಶ್ರಯ ೌಂಡೇಷನ್​ನ ಅಧ್ಯಕ್ಷ ಸಿದ್ಧಾರ್ಥ ಹಟ್ಟಿ ಅಂಬೈರ್​ ಮಾತನಾಡಿ, ಸುವರ್ಣ ಭೂಮಿ ಥೈಲ್ಯಾಂಡ್​ನಿಂದ ಬುದ್ಧ ಭೂಮಿ ಭಾರತದಲ್ಲಿ ಬೌದ್ಧ ಧಮ್ಮದ ಪ್ರಸಾರದಲ್ಲಿ ಮಲ್ಲಿಕಾರ್ಜುನ ರ್ಖಗೆ ಅವರ ಪ್ರಯತ್ನವೂ ಶ್ಲಾನೀಯ ಎಂದರು.
ಪ್ರಮುಖರಾದ ರಾಧಾಬಾಯಿ ರ್ಖಗೆ, ಥೈಲ್ಯಾಂಡ್​ನ ಸಿರಿಲಿಕ್​ ಪತ್ರಪ್ರಸಿತ್​ ಮೈಥೈ, ಶಾಂತಪ್ಪ ಸೂರನ್​, ರಮೇಶ ಬೇಗಾರ, ಸಿದ್ಧಾರ್ಥ ಹತ್ತಿಂಬಿರೆ, ಮಳೆಪಳ್ಳಿ ಲಕ್ಷ$್ಮಯ, ವಿಧಾನ ಪರಿಷತ್​ ಸದಸ್ಯ ಅರವಿಂದ ಅರಳಿ, ರಾವೇಂದ್ರ ದೊಡ್ಡಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net