ಕಲಬುರಗಿ: ಶ್ರೀ ರಾವೇಂದ್ರ ಸ್ವಾಮಿಗಳು ಜ್ಞಾನ, ಶ್ರುತಿ, ಸಂಗೀತ ಹಾಗೂ ವೀಣಾವಾದನ ಸೇರಿ ಅನೇಕ ವಿದ್ಯೆಗಳಲ್ಲಿ ಪಾರಂಗತರಾಗಿದ್ದರು. ರಾಯರು ಭೂಮಿಗೆ ಅವತರಿಸಿದ್ದು ಜ್ಞಾನಪ್ರದಾನಕ್ಕಾಗಿ ಎಂಬುದು ಅವರ ಜೀವನ ಸಂದೇಶ. ರಾಯರ ವೃಂದಾವನದ ಮುಂದೆ ನಿಂತು ಕಣ್ಮುಚ್ಚಿ ಭಕ್ತಿಭಾವದಿಂದ ಪ್ರಾರ್ಥಿಸಿದರೆ ಜ್ಞಾನ ಮತ್ತು ಶಕ್ತಿ ಅನುಗ್ರಹಿಸುತ್ತಾರೆ ಎಂದು ತಜ್ಞ ವೈದ್ಯ ಡಾ.ಉಡುಪಿಕೃಷ್ಣ ಜೋಶಿ ಹೇಳಿದರು.
ಕಲಬುರಗಿ ಕರುಣೇಶ್ವರ ನಗರದ ಶ್ರೀ ಜೈವೀರ ಹನುಮಾನ್ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರಾವೇಂದ್ರ ಮಹಾಸ್ವಾಮಿಗಳ ವರ್ಧಂತಿ ಮಹೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಜೋಶಿ, ಗುರುಗಳಾದ ಸುಧೀಂದ್ರ ತೀರ್ಥರಲ್ಲಿ ಪಾಠ ಕಲಿಯಲು ಹೋಗುತ್ತಿದ್ದಾಗ, ಊಟದ ಬದಲು ಗಂಧ&ಅತೆಯನ್ನೇ ತೋರಿಸಿ ಊಟವಾಯಿತು ಎನ್ನುತ್ತಿದ್ದರು. ಮಠ ಎಂದರೆ ಜ್ಞಾನಾರ್ಜನೆಗೆ ಮೀಸಲು ಎಂಬುದನ್ನು ತಮ್ಮ ಜೀವನದ ಮೂಲಕವೇ ಸಾರಿದ ಮಹಾನ್ ಚೇತನ ರಾಯರು. ಈ ರಾಯರ ಕುರಿತಾಗಿ ನಿತ್ಯ ಕನಿಷ್ಠ ಒಂದು ಶ್ಲೋಕ ಪಠಣೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಜ್ಞಾನದಿಂದ ಸಾಧನೆ ಮಾಡಿ ಮೋ ಹೊಂದುವುದು ಮಾನವ ಜೀವನದ ಗುರಿ ಎಂದರು.
ಸಾ ಹಯಾ ಸ್ತೋತ್ರಹಿದ ಉಲ್ಲೆಖ ಮಾಡಿದ ಅವರು, ರಾವೇಂದ್ರ ಸ್ವಾಮಿಗಳು ವೃಂದಾವನಸ್ಥರಾಗಿ ಮಂತ್ರಾಲಯದಲ್ಲಿ ನೆಲೆಸಿರುವುದಾಗಿ ಹಯಗ್ರೀವರ ಸಾಯಾಗಿ ಹೇಳಿರುವ ದೈವಿಕ ಸಂದೇಶ ಸ್ಮರಿಸಿದರು.
ಶ್ರೀ ರಾವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ 108 ಬಾರಿ ರಾವೇಂದ್ರಾಯ ಜಪ, ಭಜನಾ ಮಂಡಳಿಯಿಂದ ರಾವೇಂದ್ರ ಸ್ವಾಮಿಗಳ ಕುರಿತು ಭಜನೆ ಸಂಗೀತ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.