ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ಬುಧವಾರ ಕಾರ್ತಿಕೋತ್ಸವ ನಿಮಿತ್ತ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೇವಲಗಾಣಗಾಪುರದಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ, ವಿವಿಧೆಡೆಯಿಂದ ಹರಿದುಬಂದ ಭಕ್ತಸಾಗರ
ವಿವಿಧೆಡೆಯಿಂದ ಹರಿದುಬಂದ ಭಕ್ತಸಾಗರ
ಅಫಜಲಪುರ:ಕಾರ್ತಿಕೋತ್ಸವ ನಿಮಿತ್ತ ದೇವಲಗಾಣಗಾಪುರದಲ್ಲಿ ನಿರ್ಗುಣ ಮಠವನ್ನು ವಿಶೇಷ ತಳಿರು-ತೋರಣ, ಫಲಪುಷ್ಟ, ವಿವಿಧ ಬಣ್ಣದ ಲೈಟ್‌ಗಳಿಂದ ಸಿಂಗರಿಸಿದ್ದು, ದತ್ತ ಮಹಾರಾಜರ ಉತ್ಸವ ಮೂರ್ತಿಯ ವೈಭವದ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಬುಧವಾರ ಬೆಳಗ್ಗೆಯಿಂದ ನಿರ್ಗುಣ ಮಠದಲ್ಲಿ ದತ್ತ ಮಹಾರಾಜರಿಗೆ ಕಾಕಡಾರತಿ, ನಿರ್ಗುಣ ಪಾದುಕೆಗಳಿಗೆ ಕೇಸರ ಕಸ್ತೂರಿ ಲೇಪನ, ವಿಶೇಷ ಪೂಜೆ, ಮಹಾ ರುದ್ರಾಭಿಷೇಕ ನೆರವೇರಿತು. ಮಧ್ಯಾಹ್ನ 12ಕ್ಕೆ ಮಂತ್ರಘೋಷಗಳೊAದಿಗೆ ಮಹಾರಾಜರ ಉತ್ಸವ ಮೂರ್ತಿಯನ್ನು ನಿರ್ಗುಣ ಮಠದ ಮುಖ್ಯ ಅರ್ಚಕ ಹಾಗೂ ಸಾಲಕಾರಿ ಪ್ರಿಯಾಂಕ್ ಪೂಜಾರಿ ನೇತೃತ್ವದಲ್ಲಿ ಫಲಪುಷ್ಪಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮಂಗಳಾರತಿ ನೆರವೇರಿಸಿದ ಬಳಿಕ ಮೆರವಣಿಗೆ ಮೂಲಕ 1ಕ್ಕೆ ಸಂಗಮಕ್ಕೆ ಕೊಂಡೊಯ್ಯಲಾಯಿತು. 3ಕ್ಕೆ ಮಹಾ ಮಂಗಳಾರತಿ, ಮಹಾನೈವೇದ್ಯ ಸಮರ್ಪಿಸಿದ ಬಳಿಕ ಅನ್ನದಾನ ಮಾಡಲಾಯಿತು. ಸಂಜೆ ಎರಡ್ಮೂರು ತಾಸು ವಿಶೇಷ ಪೂಜೆ ಸಲ್ಲಿಸಿ ರಾತ್ರಿ 9ಕ್ಕೆ ಸಂಗಮದಿAದ ಹೊರಟ ಪಲ್ಲಕ್ಕಿ ಮಧ್ಯರಾತ್ರಿ ನಿರ್ಗುಣ ಮಠಕ್ಕೆ ತಲುಪಿತು.
ನರಸಿಂಹ ಸರಸ್ವತಿ ಮಹಾರಾಜರು ಅಷ್ಟತೀರ್ಥ ಪ್ರಕಟವಾದ ದಿನ ಅಷ್ಟರೂಪಗಳಲ್ಲಿ ಎಂಟು ಗ್ರಾಮಗಳಿಗೆ ತೆರಳಿ ಭಿಕ್ಷೆ ತೆಗೆದುಕೊಂಡು ಗೌರಿ ಹುಣ್ಣಿಮೆಯ ಕಾರ್ತಿಕ ಮಾಸ ಸಮಾಪ್ತಿಯಾದ ಎರಡು ದಿನದ ಉತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಸ್ವಾಗತಿಸಿ ಪ್ರತಿಪದದಂದು ಎಲ್ಲರಿಗೂ ವನಭೋಜನ ಮಾಡಿಸುವುದು ನಡೆದುಕೊಂಡು ಬರುತ್ತಿರುವ ಸಂಪ್ರದಾಯ.
ಸAಗಮವರೆಗೆ ಪಲ್ಲಕ್ಕಿ ಮೆರವಣಿಗೆ
ನಿರ್ಗುಣ ಮಠದಿಂದ ಹೊರಟ ಪಲ್ಲಕ್ಕಿ ಪ್ರಮುಖ ಬೀದಿಗಳ ಮೂಲಕ ವಿಶ್ರಾಂತಿ ಕಟ್ಟಾ, ಸಾಯಿ ಮಠ, ಕೋಟಿ ತೀರ್ಥಗಳ ಮಾರ್ಗವಾಗಿ ಸಂಗಮಕ್ಕೆ ತಲುಪಿತು. ಮಾರ್ಗದುದ್ದಕ್ಕೂ ಭಜನೆ, ಕೀರ್ತನೆ, ಶಹನಾಯಿ, ಬ್ಯಾಂಡ್ ಬ್ರಾಸ್, ಭಕ್ತರು ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ, ದತ್ತ ಮಹಾರಾಜ ಕೀ ಜೈ, ಅನುಸಯತ್ರಿ ಸುಕುಮಾರ ನಾಮಗಳಿಂದ ಜೈಘೋಷ ಮೊಳಗಿಸಿದರು.
ಇಂದು ವನಭೋಜನ
ನಿರ್ಗುಣ ಮಠದ ಸಾಲಕಾರಿ ಅರ್ಚಕರ ಪರಿವಾರದಿಂದ ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ದಪಾಟಿ, ಚಪಾತಿ, ಶೇಂಗಾ ಹೋಳಿಗೆ, ಮುದ್ದಿ ಪಲ್ಯ, ಬದನೆಕಾಯಿ ಪಲ್ಯ, ಹಿಂಡಿ ಪಲ್ಯ, ಉಳ್ಳಾಗಡ್ಡಿ ಚಟ್ನಿ, ಮೊಸರು, ಮಜ್ಜಿಗೆ, ಚಿತ್ರಾನ್ನ, ಮೊಸರನ್ನ, ಪಲಾವ, ಹಣ್ಣು ಹಂಪಲ, ತರಕಾರಿಗಳನ್ನು ಬಂದಿದ್ದ ಭಕ್ತರೆಲ್ಲರಿಗೂ ಗುರುವಾರ ವಿತರಿಸಲಾಗುತ್ತದೆ.
ನದಿಪಾಲಾದ ಯುವಕ
ಕಾರ್ತಿಕೋತ್ಸವ ನಿಮಿತ್ತ ದೇವಲಗಾಣಗಾಪುರದ ದತ್ತ ಮಹಾರಾಜರ ದರ್ಶನ ಪಡೆಯಲು ಮಹಾರಾಷ್ಟçದ ಲಾತೂರ್‌ನಿಂದ ಬಂದಿದ್ದ ಅಂಬಾದಾಸ ಮಹಾದೇವ ಕೋಕಟೆ (22) ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲುಜಾರಿ ನದಿಪಾಲಾಗಿz್ದÁನೆ. ದಿನೇದಿನೆ ಅವಘಡಗಳು ಹೆಚ್ಚಾಗುತ್ತಿದ್ದರೂ ಧಾರ್ಮಿಕ ದತ್ತಿ ಹಾಗೂ ಪೊಲೀಸ್ ಇಲಾಖೆ ನದಿ ತೀರದಲ್ಲಿ ಎಚ್ಚರಿಕೆಯ ಫಲಕ ಅಳವಡಿಸದಿರುವುದು ಮತ್ತು ಸಿಬ್ಬಂದಿ ನಿಯೋಜನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಭಕ್ತರಿಂದ ಹಣ ಪಡೆದು ಗರ್ಭಗುಡಿಯಿಂದ ಹೊರಗಡೆ ಹೋಗುವ ಸಾಲಿಗೆ ಪೊಲೀಸರು ಮತ್ತು ಖಾಸಗಿ ವ್ಯಕ್ತಿಗಳು ಜನರನ್ನು ಬಿಡುತ್ತಿz್ದÁರೆ ಎಂದು ಆರೋಪಿಸಿದರು.
"
ದೇಶದ¯್ಲೆÃ ಭಗವಂತ ತ್ರಿಮೂರ್ತಿ ರೂಪದಲ್ಲಿ ದರ್ಶನ ನೀಡುವ ಏಕೈಕ ಕ್ಷೇತ್ರ ದೇವಲ ಗಾಣಗಾಪುರ. ದತ್ತ ಮಹಾರಾಜರನ್ನು ನಿಷ್ಕಲ್ಮಶ ಮನಸ್ಸಿನಿಂದ ಆರಾಧಿಸಿದರೆ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ.