ನಗರದ ಪಿ ಆ್ಯಂಡ್ ಟಿ ನಿವಾಸಿ ಡಾ.ಸೃಷ್ಟಿ ಶಾಸ್ತ್ರಿ ಅವರು ಏಳು ವಿಷಯಗಳಲ್ಲಿ ರ್ಯಾಂಕ್ ಪಡೆದು, ಜಿಮ್ಸ್ಗೆ ಸಮಗ್ರ ಟಾಪರ್ ಆಗಿ ಹೊರಹೊಮ್ಮಿದರು. ಸೃಷ್ಟಿ ಶಾಸ್ತ್ರಿ ಅವರ ತಂದೆ ಶಿವಕುಮಾರ ಉದ್ಯಮಿಯಾಗಿದ್ದು, ತಾಯಿ ಸರಳಾ ಶಾಸ್ತ್ರಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ನಗರದ ಗುರುಕುಲ ಕಾಲೇಜಿನಲ್ಲಿ ಓದಿದ್ದು, ಪಿಯುಸಿಯಲ್ಲೂ ಶೇ.97 ಅಂಕ ಪಡೆದಿದ್ದರು. ಇದೀಗ ಜಿಮ್ಸ್ನಲ್ಲಿ ಮೂರು ವರ್ಷ ಸತತ ಟಾಪರ್ ಆಗಿದ್ದು, ಅಂತಿಮ ಸೆಮ್ನಲ್ಲಿ ಅನಾಟೊಮಿ, ಫಿಸಿಯೋಲಾಜಜಿ, ಪ್ಯಾಥೋಲಾಜಿ, ಮೆಡಿಸಿನ್, ಇಎನ್ಟಿ, ೋರೆನ್ಸಿಕ್, ಆಥೋರ್ಪೆಡಿಕ್ಸ್ ಸೇರಿ ಒಟ್ಟು 7 ವಿಷಯದಲ್ಲಿ ರ್ಯಾಂಕ್ ಪಡೆದು, ಟಾಪರ್ ಆಗಿದ್ದಾರೆ. ಶ್ರೀ ರಾವೇಂದ್ರ ಮೇಳಕುಂದಿ ಅವರ ಸ್ಮರಣಾರ್ಥ ನೀಡುವ 10 ಸಾವಿರ ರೂ. ಪ್ರಶಸ್ತಿಯನ್ನು ಬಾಚಿಕೊಂಡರು.