ಕಾರ್​ ಬಾಡಿಗೆ ಪಡೆದು ಇಸ್ಪೆಟ್​ಗೆ ಅಡವಿಟ್ಟ ತಲಾಟಿ: ಡೆಪ್ಯುಟಿ ತಹಸೀಲ್ದಾರ್​ ಎಂದು ಮೋಸ

Cheated Car owner
Cheated Car owner
Published on
ಕಲಬುರಗಿ: ಡೆಪ್ಯುಟಿ ತಹಸೀಲ್ದಾರ್​ ಎಂದು ಸುಳ್ಳು ಹೇಳಿ, ತಿಂಗಳಿಗೆ 35 ಸಾವಿರ ರೂ. ಬಾಡಿಗೆ ನೀಡುತ್ತೇನೆ ಎಂದು ಹೇಳಿ ಕರಾರು ಪತ್ರ ಬರೆಸಿಕೊಂಡು ಕಾರ್​ನ್ನು ಮಹಾರಾಷ್ಟ್ರದಲ್ಲಿ ಇಸ್ಪೆಟ್​ ಆಡಲು ಅಡ ಇಟ್ಟು, ಕಾರ್​ ಮಾಲಿಕರಿಗೆ ಮೋಸ ಮಾಡಿದ ಟನೆ ನಗರದಲ್ಲಿ ನಡೆದಿದೆ.
ಕಾಶಿನಾಥ ಕೊನಶೆಟ್ಟಿ ಮೋಸ ಮಾಡಿದ ಸರ್ಕಾರಿ ನೌಕರ. ಇತ ಆಳಂದ ತಾಲೂಕಿನ ಖಜೂರಿ ಗ್ರಾಮದ ಗ್ರಾಮ ಲೆಕ್ಕಿಗ ಇದ್ದಾನೆ. ಆದರೆ ಕಾರ್​ ಮಾಲಿಕ ಅವಿನಾಶ ರಾಠೋಡ್​ ಅವರಿಗೆ ನಾನು ಡೆಪ್ಯೂಟಿ ತಹಸೀಲ್ದಾರ್​ ಇದ್ದೇನೆ. ನನಗೆ ಕಾರ್​ ಬಾಡಿಗೆಗೆ ಬೇಕು, ತಿಂಗಳಿಗೆ 35 ಸಾವಿರ ರೂ. ನೀಡುತ್ತೇನೆ. ಚಾಲಕ, ಡೀಸೆಲ್​ ಎರಡು ಬೇಡ. ಕೇವಲ ಕಾರ್​ ನೀಡಿ ಎಂದು ಕರಾರು ಮಾಡಿಕೊಂಡು ಕಾರ್​ ಪಡೆದಿರುತ್ತಾನೆ. ಎರಡು ತಿಂಗಳ ಮುಂಗಡ ಹಣ 70 ಸಾವಿರ ನೀಡುವುದಾಗಿ ಹೇಳಿರುತ್ತಾನೆ. ಆದರೆ ಹಲವು ಬಾರಿ ಕೇಳಿದರೂ ಮುಂಗಡ ಹಣ ನೀಡಿರುವುದಿಲ್ಲ. ಇದರಿಂದ ಅನುಮಾನ ಬಂದು ಪರಿಶೀಲಿಸಿದಾಗ ಆತ ಸುಳ್ಳು ಹೇಳಿದ್ದು ಗೊತ್ತಾಗಿದೆ.
ಹಲವರಿಗೆ ಮೋಸ: ಕಾಶೀನಾಥ ಕೊನಶೆಟ್ಟಿ ಮಾದರಿಯಲ್ಲೇ ಗಣೇಶ ಚವ್ಹಾಣ್​, ರಾಜು ಜಾಧವ್​ ಸೇರಿ ಹಲವರ ಕಾರ್​ ಬಾಡಿಗೆ ಎಂದು ಪಡೆದು, ಮುಂಗಡ ನೀಡದೆ, ಬಾಡಿಗೆ ನೀಡದೇ ಮೋಸ ಮಾಡಿ, ಮಹಾರಾಷ್ಟ್ರದಲ್ಲಿ ಅಡವಿಟ್ಟು ಬಂದು ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವಿನಾಶಗೆ ಕಾಶೀನಾಥನನ್ನು ಪರಿಚಯಿಸಿದ ಕೆರಿಬೋಸಗಾ ಸಹ ಇದರಲ್ಲಿ ಭಾಗಿಯಾಗಿದ್ದು, ಸ್ಟೇಷನ್​ ಬಜಾರ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೆಟ್​ಗಾಗಿ ಮಹಾರಾಷ್ಟ್ರದಲ್ಲಿ ಅಡವಿಟ್ಟ: ಇಸ್ಪೆಟ್​ ಆಡುವ ಚಟವಿರುವ ಕಾಶೀನಾಥ ಕೊನಶೆಟ್ಟಿ ಇತನೂ ಕಾರ್​ಗಳನ್ನು ಬಾಡಿಗೆ ಎಂದು ಪಡೆದು, ಮಹಾರಾಷ್ಟ್ರದ ಅಕ್ಕಲಕೋಟದ ಜೂಜಾಡಲು ಹೋಗಿ, ಅಲ್ಲಿಯ ವಿಕ್ರಂ ರಾಠೋಡ, ಹಣಮಂತ್ರಾಯ ಗೌಡ ಅವರ ಬಳಿ ಅಡವಿಟ್ಟು ಬಂದಿದ್ದಾನೆ. ವಾಹನ ಮಾಲಿಕರಿಂದ ಮೂಲ ದಾಖಲೆ ಪಡೆದಿದ್ದ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net