ವಿಶೇಷವಾಗಿ ಚಿತ್ತಾಪುರ, ಸೇಡಂ, ವಾಡಿ ಮತ್ತು ಜೇವರ್ಗಿ ಭಾಗದ ಗಣಿ ಹಾಗೂ ಕ್ವಾರಿಗಳಿಂದ ಮಿತಿಮೀರಿದ ಭಾರ ಹೊತ್ತು ಸಾಗುವ ಲಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಜಿಲ್ಲೆಯ ಎಲ್ಲಾ ಗಣಿ ಮತ್ತು ಕ್ವಾರಿಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ 15 ದಿನಗಳ ಒಳಗಾಗಿ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಬೇಕು. ಈ ಸಿಸಿಟಿವಿಗಳ ‘ಲೈವ್ ಲಿಂಕ್’ ಅನ್ನು ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳ ಮೊಬೈಲ್‌ಗಳಿಗೆ ಸಂಪರ್ಕಿಸಲು ಆದೇಶಿಸಿದರು. ನಿಯಮ ಉಲ್ಲಂಘಿಸುವ ವಾಹನ ಜಪ್ತಿ, ಎಫ್.ಐ.ಆರ್ ದಾಖಲಿಸುವುದು ಹಾಗೂ ಕ್ವಾರಿ ಪರವಾನಗಿ ರದ್ದುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.