ಕಾಯ್ದೆಯಲ್ಲಿ ಗೋವುಗಳ ಹಿಂಸಾತ್ಮಕ ಸಾಗಣೆ ತಡೆಗೆ ಅವಕಾಶವಿದ್ದು, ಮೇ 28ರವರೆಗೆ ಸಂಪೂರ್ಣ ಬಂದೋಬಸ್ತ್ ಮಾಡಬೇಕು, ಗಡಿ ಭಾಗದಲ್ಲಿ ಹೆಚ್ಚುವರಿ ಚೆಕ್ಪೋಸ್ಟ್ ಹಾಕಿ ತಡೆಯಬೇಕು, ಮುಚ್ಚಿರುವ ಟ್ಯಾಂಕ್ಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು, ಮೀಸಲು ಪೊಲೀಸ್ ಪಡೆ ತರೆಸಿ, ಶ್ವಾನದಳದ ಮೂಲಕ ಪರಿಶೀಲಿಸಿ, ಪತ್ತೆ ಹಚ್ಚಬೇಕು, ಗೋ ಸಾಗಣೆ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಬೇಕು, ಅಕ್ರಮ ಗೋ ವ್ಯವಹಾರದ ಮಾಫಿಯಾ ಜಾಲ ಭೇದಿಸಬೇಕು, ಅಕ್ರಮ ಗೋ ಸಾಗಣೆ, ವಧೆ, ಮಾಂಸ ಮಾರಾಟಗಾರರನ್ನು ಗುರುತಿಸಿ, ಕೋಕಾ ಕಾಯ್ದೆಯಂತೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.