ನವಕಲ್ಯಾಣ ಕರ್ನಾಟಕಕ್ಕೆ ಬದ್ಧತೆ ಪ್ರದರ್ಶಿಸಿ

ಕಲಬುರಗಿ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಭಾನುವಾರ ಕರೆದಿದ್ದ ಕಕ ಹೋರಾಟ ಸಮಿತಿ ಕೋರ್​ ಕಮಿಟಿ ಸಭೆಯಲ್ಲಿ ಲಕ್ಷಣ ದಸ್ತಿ ಮಾತನಾಡಿದರು. ಬಸವರಾಜ ದೇಶಮುಖ, ಪ್ರೊ.ಆರ್​.ಕೆ.ಹುಡುಗಿ, ಬಸವರಾಜ ಕುಮ್ನೂರ ಇತರರಿದ್ದರು.
ಕಲಬುರಗಿ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಭಾನುವಾರ ಕರೆದಿದ್ದ ಕಕ ಹೋರಾಟ ಸಮಿತಿ ಕೋರ್​ ಕಮಿಟಿ ಸಭೆಯಲ್ಲಿ ಲಕ್ಷಣ ದಸ್ತಿ ಮಾತನಾಡಿದರು. ಬಸವರಾಜ ದೇಶಮುಖ, ಪ್ರೊ.ಆರ್​.ಕೆ.ಹುಡುಗಿ, ಬಸವರಾಜ ಕುಮ್ನೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಕೆಶಿ ಸರ್ಕಾರಕ್ಕೆ ಕಕ ಹೋರಾಟ ಸಮಿತಿ ಸಲಹೆ
  • ಕೋರ್​ ಕಮಿಟಿ ಸಭೆ
ಕಲಬುರಗಿ: ಡಿ.ಕೆ. ಶಿವಕುಮಾರ್​ ಸರ್ಕಾರ ಸಂವಿಧಾನದ 371(ಜೆ) ವಿಧಿಯಡಿ ಕಲ್ಯಾಣ ಕರ್ನಾಟಕವನ್ನು ಕಾಲಮಿತಿಯಲ್ಲಿ ನವಕಲ್ಯಾಣ ಕರ್ನಾಟಕ ನಿರ್ಮಾಣಕ್ಕೆ ನೀಲಿನೆ ಸಿದ್ಧಪಡಿಸಿ ವೈಾನಿಕ ಕ್ರಿಯಾಯೋಜನೆ ರೂಪಿಸಬೇಕು ಎಂದು ಕಕ ಹೋರಾಟ ಸಮಿತಿ ಆಗ್ರಹಿಸಿದೆ.
ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯಲ್ಲಿ ಸಮಿತಿ ಗೌರವಾಧ್ಯ ಬಸವರಾಜ ದೇಶಮುಖ ಅಧ್ಯತೆಯಲ್ಲಿ ಭಾನುವಾರ ಕರೆದಿದ್ದ ಕೋರ್​ ಕಮಿಟಿ ಸಭೆಯಲ್ಲಿ ಅಧ್ಯ ಲಕ್ಷ್ಮಣ ದಸ್ತಿ ಅವರು ಕೆಕೆಆರ್​ಡಿಬಿಯ ಅಸ್ಪಷ್ಟ ಧೋರಣೆ, ರಾಜ್ಯ ಸರ್ಕಾರ ೂಷಿಸಿರುವ ಪ್ರತ್ಯೇಕ ಸಚಿವಾಲಯದ ವಿಳಂಬ ನೀತಿ ಬಗ್ಗೆ ಪ್ರಸ್ತಾಪಿಸಿದರು. 
ಪ್ರೊ.ಆರ್​.ಕೆ. ಹುಡುಗಿ ಮಾತನಾಡಿ, ಕಲ್ಯಾಣದ ಅಭಿವೃದ್ಧಿ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಜತೆ ಸಮಾಲೋಚನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದರು.
ಪ್ರೊ.ಬಸವರಾಜ ಕುಮ್ನೂರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉದ್ದೇಶ ದಾರಿ ತಪ್ಪುತ್ತಿದೆ. ಆದಷ್ಟು ಶ್ರೀ ಮಂಡಳಿ ಕಾರ್ಯದರ್ಶಿ, ಅಧ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಬೇಕು ಎಂದು ಹೇಳಿದರು. ಸನಾವುಲ್ಲಾ, ಕೈಲಾಸನಾಥ ದೀತ್​, ಲಿಂಗರಾಜ ಸಿರಗಾಪುರ, ಸಂಧ್ಯಾರಾಜ ಕೆಲ ಸಲಹೆ ನೀಡಿದರು. 
ರೌಫ್​ ಖಾದ್ರಿ, ಪೊ.ಮಂಜೂರ್​ ಡೆಕ್ಕನಿ, ರಿಜ್ವಾನ್​ ಸಿದ್ಧಿಕಿ, ರಾಜು ಜೈನ್​, ಕಲ್ಯಾಣರಾವ ಟಿ., ಭೀಮಶೆಟ್ಟಿ ಮುಕ್ಕಾ, ಮುತ್ತಣ್ಣ ನಡಗೇರಿ, ಮುಕ್ತಾರ್​, ಎಂ.ಬಿ. ನಿಂಗಪ್ಪ, ಬಾಬುರಾವ ಗಂವ್ಹಾರ, ಅಸ್ಲಂ ಚೌಂಗೆ, ಬಾಬಾ ಫಕ್ರುದ್ದೀನ್​, ಶೈಲೇಂದ್ರ ಬಿರಾದಾರ, ವಿನಯಕುಮಾರ ಶಾಸಿ, ದೇವೆಂದ್ರಕುಮಾರ ಕೆ., ವಿಜಯಕುಮಾರ ಪಾಟೀಲ್​ ಇತರರಿದ್ದರು.
ಕೈಗೊಂಡ ನಿರ್ಣಯ
ಕಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ತಣ ಕ್ರಮ ಕೈಗೊಳ್ಳಬೇಕು. ಗುಲ್ಬರ್ಗ ಸೇರಿ ಎಲ್ಲ ವಿಶ್ವವಿದ್ಯಾಲಯಗಳ ಗುಣಮಟ್ಟ ಹೆಚ್ಚಿಸಲು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕಕ ಅಭಿವೃದ್ಧಿಗೆ 5-10 ವರ್ಷದ ವೈಾನಿಕ ಕ್ರಿಯಾಯೋಜನೆ ರೂಪಿಸಬೇಕು. ನೀರಾವರಿ ಯೋಜನೆ ಮುಗಿಯುವವರೆಗೆ ಬೇರೆ ಯೋಜನೆ ಕೈಗೆತ್ತಿಕೊಳ್ಳಬಾರದು. ಕಲ್ಯಾಣ ಪಥ ರಸ್ತೆ ಮತ್ತು ಬೀದರ್​ನಿಂದ ಬಳ್ಳಾರಿವರೆಗೆ ಚತುಷ್ಪಥ ರಸ್ತೆ ನಿರ್ಮಿಸಿ ಕೈಗಾರಿಕೆ, ವಾಣಿಜ್ಯ ಮತ್ತು ಕೃಷಿ ೇತ್ರಕ್ಕೆ ಉತ್ತೇಜನ ನೀಡಬೇಕು. ಗೋವಿಂದರಾವ್​ ಕಮಿಟಿ ತಿಳಿಸಿರುವಂತೆ ಬಸವಕಲ್ಯಾಣದಿಂದ ಬಾಗೇವಾಡಿವರೆಗೆ ಪ್ರವಾಸಿ ತಾಣ ಅಭಿವೃದ್ಧಿಪಡಿಸಬೇಕು. ಕನಿಷ್ಠ ಐದು ಸಚಿವ ಸ್ಥಾನ ಕಕಕ್ಕೆ ನೀಡಬೇಕು. ಕಲಬುರಗಿಯಲ್ಲಿ ಕನಿಷ್ಠ ಐದು ಮೇಲ್ಸೇತುವೆ ನಿರ್ಮಾಣ ಮಾಡಿ ಹೊಸ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಆಗಬೇಕು. ರಾಯಚೂರಿನಲ್ಲಿ ಏಮ್ಸ್​ ಸ್ಥಾಪಿಸಬೇಕು. ಬೀದರ್​ ಜಿಲ್ಲೆ ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು.
"

ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಣ, ಉದ್ಯೋಗ, ಪ್ರವಾಸೋದ್ಯಮ, ಕ್ರೀಡೆ ಸೇರಿ ಸಮಗ್ರ ಕ್ಷೇತ್ರ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಸಚಿವರಾದ ಪ್ರಿಯಾಂಕ್​ ಖರ್ಗೆ, ಈಶ್ವರ ಖಂಡ್ರೆ, ಡಾ.ಶರಣಪ್ರಕಾಶ ಪಾಟೀಲ್​ ಗಂಭೀರ ಪರಿಗಣಿಸಬೇಕು.

— > ಲಕ್ಷ್ಮಣ ದಸ್ತಿ ಸಂಸ್ಥಾಪಕ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net