

ಪ್ರಮುಖ ಮುಖ್ಯಾಂಶಗಳು
ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಬೆನಕನಹಳ್ಳಿ ಎಂಬುವರು ಜಾತ್ರಾ ಮೈದಾನ ಜಾಗ ಕುರಿತು ತಕರಾರು ತೆಗೆದು ಅಂಗಡಿ ಹಾಕಿಕೊಂಡಿದ್ದರು. ಇದೀಗ ತೆರವುಗೊಳಿಸುವಂತೆ ಕೋರ್ಟ್ ಆದೇಶದಂತೆ ಬೇಲಿಫ್‌ಗಳ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸಿ ಸ್ಥಳವನ್ನು ಶರಣಬಸವೇಶ್ವರ ಸಂಸ್ಥಾನಕ್ಕೆ ಒಪ್ಪಿಸಲಾಗುತ್ತಿದೆ.
| ಅವಿನಾಶ ಶಿಂಧೆಆಯುಕ್ತ, ಮಹಾನಗರ ಪಾಲಿಕೆ
ಕೋರ್ಟ್ ಆದೇಶ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪರವಾಗಿ ಆಗಿದೆ. ಅದರಂತೆ ಅನಧಿಕೃತ ಅಂಗಡಿ ತೆರವುಗೊಳಿಸಿ ಸಂಸ್ಥಾನಕ್ಕೆ ವಹಿಸಿದ್ದಾರೆ. ಎಂದಿನAತೆ ಶರಣನ ಜಾತ್ರೆ ಸಂದರ್ಭದಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಿಕೊಳ್ಳುವವರಿಗೆ ಮೂರು ತಿಂಗಳ ಅವಧಿಗಾಗಿ ಜಾಗಾ ಹಂಚಿಕೆ ಮಾಡುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದು.
| ಬಸವರಾಜ ದೇಶಮುಖಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ