ಶರಣಬಸವ ವಿವಿ-ವಿಯಟ್ನಾಂ ವಿವಿ ಮಧ್ಯೆ ಒಡಂಬಡಿಕೆ

ಶೈಕ್ಷಣಿಕ ಅಭಿವೃದ್ಧಿ ಮತ್ತಷ್ಟು ಬಲಪಡಿಸುವ ಉz್ದೆÃಶದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯವು ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯ ಇಂಡಸ್ಟಿçಯಲ್ ವಿವಿಯೊಂದಿಗೆ ಐದು ವರ್ಷ ಅವಧಿಗೆ ಭಾನುವಾರ ಮಾಡಿಕೊಂಡ ತಿಳಿವಳಿಕೆ ಒಪ್ಪಂದ ಪತ್ರವನ್ನು ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಮತ್ತು ಡಾ.ಬುಯಿ ಥನ್ಹ್ ಹಂಗ್ ವಿನಿಮಯ ಮಾಡಿಕೊಂಡರು. ಪ್ರೊ.ಅನಿಲಕುಮಾರ ಬಿಡವೆ, ಪ್ರೊ.ವಿ.ಡಿ.ಮೈತ್ರಿ, ಡಾ.ಎಸ್.ಎಚ್.ಹೊನ್ನಳ್ಳಿ, ಡಾ.ಸುಜಾತಾ ಮಲ್ಲಾಪುರ, ಡಾ.ಶಿವಕುಮಾರ ಜವಳಿಗಿ ಇದ್ದರು.
ಶೈಕ್ಷಣಿಕ ಅಭಿವೃದ್ಧಿ ಮತ್ತಷ್ಟು ಬಲಪಡಿಸುವ ಉz್ದೆÃಶದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯವು ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯ ಇಂಡಸ್ಟಿçಯಲ್ ವಿವಿಯೊಂದಿಗೆ ಐದು ವರ್ಷ ಅವಧಿಗೆ ಭಾನುವಾರ ಮಾಡಿಕೊಂಡ ತಿಳಿವಳಿಕೆ ಒಪ್ಪಂದ ಪತ್ರವನ್ನು ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಮತ್ತು ಡಾ.ಬುಯಿ ಥನ್ಹ್ ಹಂಗ್ ವಿನಿಮಯ ಮಾಡಿಕೊಂಡರು. ಪ್ರೊ.ಅನಿಲಕುಮಾರ ಬಿಡವೆ, ಪ್ರೊ.ವಿ.ಡಿ.ಮೈತ್ರಿ, ಡಾ.ಎಸ್.ಎಚ್.ಹೊನ್ನಳ್ಳಿ, ಡಾ.ಸುಜಾತಾ ಮಲ್ಲಾಪುರ, ಡಾ.ಶಿವಕುಮಾರ ಜವಳಿಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೈಕ್ಷಣಿಕ ಅಭಿವೃದ್ಧಿ ಬಲಪಡಿಸುವ ಉz್ದÉÃಶ
  • ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಹಕಾರ ಉತ್ತೇಜನ
ಕಲಬುರಗಿ: ಉನ್ನತ ಶಿಕ್ಷಣ ಕ್ಷೇತ್ರವನ್ನು ಅಂತಾರಾಷ್ಟಿçÃಯ ಸಹಕಾರ ಮೂಲಕ ಮತ್ತಷ್ಟು ಬಲಪಡಿಸುವ ಉz್ದÉÃಶದಿಂದ ಶರಣಬಸವ ವಿಶ್ವವಿದ್ಯಾಲಯವು ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯ ಇಂಡಸ್ಟಿçಯಲ್ ವಿಶ್ವವಿದ್ಯಾಲಯ ಜತೆ ಸಂಶೋಧನೆ ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬAಧಿಸಿದAತೆ ಐದು ವರ್ಷ ಅವಧಿಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಡಂಬಡಿಕೆಗೆ ವಿಯೆಟ್ನಾಂ ವಿವಿ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಬುಯಿ ಥನ್ಹ್ ಹಂಗ್ ಹಾಗೂ ಶರಣಬಸವ ವಿವಿ ಕುಲಸಚಿವೆ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ ಭಾನುವಾರ ಸಹಿ ಹಾಕಿ ವಿನಿಮಯ ಮಾಡಿಕೊಂಡರು. ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಸಂಶೋಧನಾ ನಿರ್ದೇಶಕ ಪ್ರೊ.ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಚ್. ಹೊನ್ನಳ್ಳಿ, ಸಂಶೋಧನಾ ಡೀನ್ ಡಾ.ಸುಜಾತಾ ಮಲ್ಲಾಪುರ ಹಾಗೂ ಡೀನ್ ಡಾ.ಶಿವಕುಮಾರ ಜವಳಿಗಿ ಇದ್ದರು.
ಈ ಒಡಂಬಡಿಕೆ ಎರಡೂ ವಿವಿ ನಡುವೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಹಕಾರ ಉತ್ತೇಜಿಸುವ ಹಾಗೂ ಮತ್ತಷ್ಟು ಬಲಪಡಿಸುವ ಉz್ದÉÃಶ ಹೊಂದಿದೆ. ಪರಸ್ಪರ ಆಸಕ್ತಿ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನಾ ಚಟುವಟಿಕೆ, ಸಂಯುಕ್ತ ಸಂಶೋಧನಾ ಯೋಜನೆ ಹಾಗೂ ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಸಂಸ್ಥೆಗಳಿAದ ಜಂಟಿಯಾಗಿ ಸಂಶೋಧನಾ ಅನುದಾನ ಪಡೆಯಲು ಅವಕಾಶ ಅನ್ವೇಷಿಸುವುದು ಇದರ ಪ್ರಮುಖ ಉz್ದÉÃಶ.
ಸಂಶೋಧನಾ ಲೇಖನ, ಪುಸ್ತಕ ಹಾಗೂ ಸಮ್ಮೇಳನಗಳ ಸಂಶೋಧನಾ ಪ್ರಬಂಧಗಳ ಜಂಟಿ ಪ್ರಕಟಣೆ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ವಿನಿಮಯ ಕಾರ್ಯಕ್ರಮ, ಇಂಟರ್ನ್ಶಿಪ್, ಪ್ರಾಜೆಕ್ಟ್ ಕಾರ್ಯ ಹಾಗೂ ಸಂಶೋಧನಾ ಭೇಟಿಗಳಿಗೆ ಉತ್ತೇಜನ ಸಹ ಒಡಂಬಡಿಕೆಯ ಭಾಗವಾಗಿದೆ. ಸಂಯುಕ್ತ ಚಟುವಟಿಕೆಗಳಿಂದ ಉಂಟಾಗುವ ಬೌದ್ಧಿಕ ಆಸ್ತಿ ಹಕ್ಕು ಕುರಿತು ಒಡಂಬಡಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಲಿಖಿತ ರೂಪದಲ್ಲಿ ಒಪ್ಪಂದವಾಗದ ಹೊರತು ಅಂತಹ ಬೌದ್ಧಿಕ ಆಸ್ತಿ ಎರಡೂ ವಿವಿಗಳ ಜಂಟಿ ಮಾಲೀಕತ್ವದಲ್ಲಿ ಇರಲಿದೆ ಎಂದು ತಿಳಿಸಲಾಗಿದೆ.
"

ಉಭಯ ವಿವಿಗಳು ಜಂಟಿಯಾಗಿ ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಾಗಾರ, ಸಿಂಪೋಸಿಯA ಮತ್ತು ತರಬೇತಿ ಆಯೋಜನೆ, ಶೈಕ್ಷಣಿಕ ಕಾರ್ಯಕ್ರಮ ಹಾಗೂ ಸಾಮರ್ಥ್ಯ ವೃದ್ಧಿ ಉಪಕ್ರಮಗಳಲ್ಲಿ ಪರಸ್ಪರ ಸಹಕಾರ ನೀಡಲು ಈ ಒಪ್ಪಂದ ಅವಕಾಶ ಕಲ್ಪಿಸಲಿದೆ.| ಡಾ.ಲಕ್ಷಿö್ಮà ಪಾಟೀಲ್ ಮಾಕಾಕುಲಸಚಿವೆ, ಶರಣಬಸವ ವಿವಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net