ಕಲಬುರಗಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಆಯೋಜಿಸಿದ್ದ ಸಂಕ್ರಾಂತಿ ಕಾವ್ಯ ಸಂಭ್ರಮ ಕಾರ್ಯಕ್ರಮಕ್ಕೆ ಮಹಿಳಾ ಸರ್ಕಾರಿ ನೌಕರರ ಸಂದ ಅಧ್ಯಕ್ಷೆ ರೋಷನಿಗೌಡ ಚಾಲನೆ ನೀಡಿದರು. ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಧರ್ಮಣ್ಣ ಧನ್ನಿ, ಶಿವಲೀಲಾ ಕಲಗುರ್ಕಿ, ಸಿದ್ಧಲಿಂಗ ಬಾಳಿ, ಗೌಸುದ್ದೀನ್ ತುಮಕೂರಕರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕನ್ನಡ ಭವನದಲ್ಲಿ ಸಂಕ್ರಾಂತಿ ಕಾವ್ಯ ಸಂಭ್ರಮ
ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ ಆಯೋಜನೆ
ಕಲಬುರಗಿ: ನೆಲ, ಜಲ, ನಾಡು&ನುಡಿ, ರೈತರು ಕುರಿತಾಗಿ ಬಂದ ಕಾವ್ಯ ಪ್ರೀತಿಗೆ ಸಂಕ್ರಾಂತಿ ಸೊಬಗಿನ ಎಳ್ಳು, ಬೆಲ್ಲ ಸವಿಯುವ ಸಂಭ್ರಮ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ಕವಿಗೋಷ್ಠಿಯ ವಿಶೇಷವಾಗಿತ್ತು.
ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂದ ಅಧ್ಯಕ್ಷೆ ರೋಷನಿ ಗೌಡ ಮಾತನಾಡಿ, ಇಂತಹ ಕವಿಗೋಷ್ಠಿಯಿಂದ ಒಂದಾಗಿ ಬೆರೆಯುವ ಅವಕಾಶ ಸಿಗಲಿದೆ. ಆ ಮೂಲಕ ಭಾಷೆ ಮತ್ತು ಸಂಸತಿ ಶ್ರೀಮಂತಗೊಳಿಸಲು ಸಾಧ್ಯ ಎಂದರು.
ಜಿಲ್ಲಾ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಸಂಕ್ರಾಂತಿ ಕಾವ್ಯ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಖಡ್ಗಕ್ಕಿಂತ ಲೇಖನಿ ಮುಖ್ಯ. ಈ ಲೇಖನಿಯಿಂದಲೇ ನಾವು ಯುದ್ಧ ಗೆಲ್ಲಬಹುದು. ಸದೃಢ ಸಮಾಜ ನಿರ್ಮಿಸುವಲ್ಲಿ ಮಹಿಳಾ ಬರಹಗಾರರ ಪಾತ್ರ ಪ್ರಮುಖ ಎಂದ ಅವರು, ಜಿಲ್ಲೆಯಲ್ಲಿ ಕಸಾಪ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಾವ್ಯ ನಮ್ಮ ಜೀವನದ ಪ್ರತಿಬಿಂಬ. ಅದು ನಮ್ಮ ಭಾವನೆ, ಅನುಭವ ಹಾಗೂ ಕನಸುಗಳನ್ನು ಶಬ್ದಗಳಲ್ಲಿ ಕಟ್ಟಿ ತೋರಿಸುತ್ತದೆ. ಕಾವ್ಯ ನಮಗೆ ಜೀವನದ ಅರ್ಥ ತಿಳಿಸಿಕೊಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಡಾ.ಗೌಸುದ್ದೀನ್ ತುಮಕೂರಕರ್ ಮಾತನಾಡಿ, ರನ್ನ, ಪೊನ್ನ, ಕುವೆಂಪು, ಬೇಂದ್ರೆ, ಹಿರಿಯರ ಕಾವ್ಯಗಳನ್ನು ಆಸ್ವಾದಿಸಬೇಕು. ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಹೇಳಿದರು.
ಕಸಾಪ ಮುಂಬರುವ ದಿನಗಳಲ್ಲಿ ಕಲಬುರಗಿ ಜಿಲ್ಲಾ ಮಟ್ಟದ ಕವಿ ಸಮ್ಮೇಳನ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಾಂದರ್ಭಿಕ ಕಾರ್ಯಕ್ರಮ ರೂಪಿಸಿ ಯುವ ಲೇಖಕರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರ ನಡೆದಿದೆ.