ಸುಸ್ಥಿರ ಚಿಂತನೆ ಚರ್ಚೆ: ಪ್ರೊ.ಸುಬ್ರಹ್ಮಣ್ಯ ಅವರು ಅಂತರ-ಪೀಳಿಗೆಯ ಸಮಾನತೆಯ ಪರಿಕಲ್ಪನೆ ಮತ್ತು ಸಂಶೋಧನೆಯಲ್ಲಿ ಸುಸ್ಥಿರ ಚಿಂತನೆಯ ಪ್ರಾಮುಖ್ಯತೆ ಕುರಿತು ಚರ್ಚಿಸಿ, ಜಲಪೈಗುರಿಯಲ್ಲಿ ನಡೆದ ವಾಮಾಚಾರಕ್ಕೆ ಸಂಬAಧಿಸಿದ ಘಟನೆಗಳನ್ನು ಅವರು ಮನವೊಲಿಸುವ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಸಂಶೋಧನೆಯ ಉದಾಹರಣೆಯಾಗಿ ಉಲ್ಲೇಖಿಸಿದರು. ಪ್ರಸ್ತುತ ಹಾಗು ಪ್ರಮುಖ ಜಾಗತಿಕ ಸಮಸ್ಯೆಗಳ ಕುರಿತು ಅಧ್ಯಯನ ಕೈಗೊಳ್ಳಲು ವಿದ್ವಾಂಸರನ್ನು ಪ್ರೋತ್ಸಾಹಿಸಿದರು. ವಿದ್ವಾಂಸರು ಸಂಶೋಧನಾ ಕರ್ತೃತ್ವವನ್ನು ಅಭಿವೃದ್ಧಿಪಡಿಸಲು, ಅಸ್ತಿತ್ವದಲ್ಲಿರುವ ವ್ಯವಸ್ಥೆ ಪ್ರಶ್ನಿಸಲು, ಅನ್ವೇಷಿಸಲು ಮತ್ತು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವಂತೆ ಒತ್ತಾಯಿಸಿದರು.